ಕರ್ನಾಟಕ

karnataka

ETV Bharat / sports

18 ಆಟಗಾರರನ್ನು ಉಳಿಸಿಕೊಂಡ ಸಿಎಸ್​ಕೆ: ಜಾಧವ್, ಚಾವ್ಲಾ ಸೇರಿ 6 ಮಂದಿ ಔಟ್​ - ರೀಟೈನ್​ ಮಾಡಿಕೊಂಡ ಆಟಗಾರರ ಪಟ್ಟಿ

2018ರ ಹರಾಜಿನಲ್ಲಿ ಕೇದಾರ್​ ಜಾಧವ್​ರನ್ನು 7.8 ಕೋಟಿ ರೂ. ನೀಡಿ ಸಿಎಸ್​ಕೆ ಖರೀದಿಸಿತ್ತು. ಆದರೆ ಒಂದು ಆವೃತ್ತಿಯಲ್ಲೂ ಅವರು ನಿರೀಕ್ಷೆ ಮೂಡಿಸುವಷ್ಟು ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅಲ್ಲದೆ 2021ರ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ತೋರಿ ಭಾರಿ ಟೀಕೆಗೆ ಗುರಿಯಾಗಿದ್ದರು.

ಚೆನ್ನೈ ಸೂಪರ್ ಕಿಂಗ್ಸ್​
ಚೆನ್ನೈ ಸೂಪರ್ ಕಿಂಗ್ಸ್​

By

Published : Jan 20, 2021, 8:02 PM IST

ಮುಂಬೈ: ಮೂರು ಬಾರಿ ಐಪಿಎಲ್ ಚಾಂಪಿಯನ್​ ಹಾಗೂ ಲೀಗ್​ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್​ ಕಿಂಗ್ಸ್ 2021ರ ಮಿನಿ ಹರಾಜಿಗೂ ಮುನ್ನ ದುಬಾರಿ ಆಟಗಾರರಾದ ಕೇದಾರ್ ಜಾಧವ್ ಹಾಗೂ ಪಿಯೂಷ್ ಚಾವ್ಲಾರನ್ನು ತಂಡದಿಂದ ಕೈಬಿಟ್ಟಿದೆ. ಒಟ್ಟು 18 ಆಟಗಾರರನ್ನು ಉಳಿಸಿಕೊಂಡಿದೆ.

2018ರ ಹರಾಜಿನಲ್ಲಿ ಕೇದರ್​ ಜಾಧವ್​ರನ್ನು 7.8 ಕೋಟಿ ರೂ. ನೀಡಿ ಸಿಎಸ್​ಕೆ ಖರೀದಿಸಿತ್ತು. ಆದರೆ ಒಂದು ಆವೃತ್ತಿಯಲ್ಲೂ ಅವರು ನಿರೀಕ್ಷೆ ಮೂಡಿಸುವಷ್ಟು ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅಲ್ಲದೆ 2021ರ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ತೋರಿ ಭಾರಿ ಟೀಕೆಗೆ ಗುರಿಯಾಗಿದ್ದರು.

ಇನ್ನು 32 ವರ್ಷದ ಚಾವ್ಲಾರನ್ನು 2020ರಲ್ಲಿ 6.7 ಕೋಟಿ ರೂ. ನೀಡಿ ಸಿಎಸ್​ಕೆ ಖರೀದಿಸಿತ್ತು. ಆದರೆ ಇವರು ಕೂಡ ದುಬೈನಲ್ಲಿ ನಡೆದ ಐಪಿಎಲ್​ನಲ್ಲಿ ವೈಫಲ್ಯ ಅನುಭವಿಸಿದ್ದರು. ಇವರ ಜೊತೆಗೆ ಸಿಎಸ್​ಕೆ ಮುರಳಿ ವಿಜಯ್, ಹರ್ಬಜನ್​ ಸಿಂಗ್​, ಮೋನುಕುಮಾರ್ ಸಿಂಗ್ ಹಾಗೂ ಶೇನ್​ ವಾಟ್ಸನ್​ರನ್ನು ಬಿಡುಗಡೆಗೊಳಿಸಿದೆ. ವಾಟ್ಸನ್​ ಎಲ್ಲಾ ಮಾದರಿಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದಾರೆ.

ಸಿಎಸ್​ಕೆ ಉಳಿಸಿಕೊಂಡಿರುವ ಆಟಗಾರರು

ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್​, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ಜೋಶ್ ಹೆಜಲ್ವುಡ್​, ಲುಂಗಿ ಎಂಗಿಡಿ, ಅಂಬಾಟಿ ರಾಯುಡು, ಕರ್ನ್​ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ರುತುರಾಜ್ ಗಾಯಕ್ವಾಡ್​, ಎನ್.ಜಗದೀಶನ್​, ಇಮ್ರಾನ್ ತಾಹೀರ್, ದೀಪಕ್ ಚಹಾರ್, ಕೆ.ಎಂ.ಆಸಿಫ್, ಆರ್.ಸಾಯ್​ ಕಿಶೋರ್.​

ABOUT THE AUTHOR

...view details