ಕರ್ನಾಟಕ

karnataka

ETV Bharat / sports

ಹೆಜಲ್​ವುಡ್​ ಬದಲಾಗಿ ಬೇರೆ ಆಟಗಾರನನ್ನು ಆಯ್ಕೆ ಮಾಡುವ ಅವಶ್ಯಕತೆ ತಂಡಕ್ಕಿಲ್ಲ: ಸಿಎಸ್​ಕೆ - ಐಪಿಎಲ್ 2021

ಮ್ಯಾಕ್ಸ್​ವೆಲ್, ಕಮ್ಮಿನ್ಸ್​, ವಾರ್ನರ್​ ಸೇರಿದಂತೆ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಕ್ಕಾಗಿ ಇಂದು ಆಸ್ಟ್ರೇಲಿಯಾದ ಐಪಿಎಲ್ ಬೌಂಡ್ ಆಟಗಾರರು ಇಂದು ಭಾರತಕ್ಕೆ ಹೊರಟಿದ್ದಾರೆ. ಆದರೆ ಕೊನೆಗಳಿಗೆಯಲ್ಲಿ ಹೆಜಲ್​ವುಡ್ ಐಪಿಎಲ್​ನಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿದ್ದರು.

ಹೆಜಲ್​ವುಡ್​
ಹೆಜಲ್​ವುಡ್​

By

Published : Apr 1, 2021, 10:49 PM IST

ಮುಂಬೈ: ಆಸ್ಟ್ರೇಲಿಯಾ ವೇಗದ ಬೌಲರ್​ ಜೋಶ್ ಹೆಜಲ್​ವುಡ್​ರಿಂದ ತೆರವಾಗಿರುವ ಸ್ಥಾನಕ್ಕೆ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಿಎಸ್​ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾಕ್ಸ್​ವೆಲ್, ಕಮ್ಮಿನ್ಸ್​, ವಾರ್ನರ್​ ಸೇರಿದಂತೆ ಐಪಿಎಲ್ ಬೌಂಡ್ ಆಟಗಾರರು 14ನೇ ಆವೃತ್ತಿಯಲ್ಲಿ ಆಡುವುದಕ್ಕಾಗಿ ಆಸ್ಟ್ರೇಲಿಯಾದಿಂದ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಆದರೆ ಕೊನೆಗಳಿಗೆಯಲ್ಲಿ ಹೆಜಲ್​ವುಡ್ ಐಪಿಎಲ್​ನಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿದ್ದರು. ಅವರು ಕಳೆದ 10 ತಿಂಗಳಿನಿಂದ ಬಯೋಬಬಲ್​ನಲ್ಲಿರುವುದರಿಂದ ಮುಂದಿನ 2 ತಿಂಗಳ ಕಾಲ ತಾವು ಮನೆಯಲ್ಲಿ ಸಮಯ ಕಳೆಯಲು ಬಯಸಿರುವುದಾಗಿ ತಿಳಿಸಿದ್ದರು.

ಹೆಜಲ್​ವುಡ್ ಐಪಿಎಲ್​ನಿಂದ ಹೊರ ಹೋಗುತ್ತಿದ್ದಂತೆ ಬದಲಿ ಆಟಗಾರನಾಗಿ ಇಂಗ್ಲೆಂಡ್​ನ ಅಲೆಕ್ಸ್​ ಹೇಲ್ಸ್​ ಹೆಸರು ಕೇಳಿಬರುತ್ತಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಸ್​ಕೆ ಅಧಿಕಾರಿಯೊಬ್ಬರು, ಇದು ಹೆಜಲ್​ವುಡ್​ರಿಂದ ತಕ್ಷಣ ನಿರ್ಧಾರವಾಗಿದೆ. ನಾವು ಇದಕ್ಕೆ ಸಿದ್ಧರಾಗಿರಲಿಲ್ಲ. ಆದರೆ ಬದಲಿ ಆಟಗಾರನ ಆಯ್ಕೆಯ ನಿರ್ಧಾರಕ್ಕೆ ಬರುವ ಮುನ್ನ ನಾವು ವಿವಿಧ ಆಯ್ಕೆಗಳನ್ನು ನೋಡುತ್ತೇವೆ. ಆದರೆ ನಮ್ಮಲ್ಲಿ ಎಲ್ಲಾ ಸ್ಥಾನಗಳಿಗೂ ಅತ್ಯುತ್ತಮ ಆಯ್ಕೆಗಳಿವೆ. ಹಾಗಾಗಿ ತಂಡದ ನಿರ್ವಹಣೆ ನಮಗೆ ಬದಲಿ ಆಟಗಾರರ ಅಗತ್ಯವಿಲ್ಲ ಎಂದು ಭಾವಿಸಿದರೆ, ನಾವು ಹುಡುಕುವ ಗೋಜಿಗೆ ಹೋಗುವುದಿಲ್ಲ" ಎಂದು ಹೇಳಿದ್ದಾರೆ.

ಹೆಜಲ್​ವುಡ್​ 2021ರ ಐಪಿಎಲ್​ನಿಂದ ಹೊರಹೋದ ನಾಲ್ಕನೇ ಕ್ರಿಕೆಟಿಗನಾಗಿದ್ದಾರೆ. ಈಗಾಗಲೇ ಜೋಶ್ ಪಿಲಿಪ್ಪೆ ಆರ್​ಸಿಬಿಯಿಂದ, ಮಿಚೆಲ್ ಮಾರ್ಷ್​ ಸನ್​ರೈಸರ್ಸ್​ ಹೈದರಾಬಾದ್​ನಿಂದ ಹೊರಹೋಗಿದ್ದಾರೆ. ಪಿಲಪ್ಪೆ ಬದಲಿಗೆ ನ್ಯೂಜಿಲ್ಯಾಂಡ್​ನ ಫಿನ್ ಅಲೆನ್, ಮಾರ್ಷ್​ ಬದಲಿಗೆ ಜೇಸನ್​ ರಾಯ್ ತಂಡಗಳನ್ನು ಸೇರಿಕೊಂಡಿದ್ದಾರೆ.

ಇದನ್ನು ಓದಿ:ಕಳೆದ ಐಪಿಎಲ್ ಪರಿಸ್ಥಿತಿ ಬೇರೆ, ಈ ಬಾರಿ ನಾವೆಲ್ಲರೂ ಆಕ್ರಮಣಕಾರಿ ರಾಹುಲ್ ನೋಡಲಿದ್ದೇವೆ: ಜಾಫರ್​

ABOUT THE AUTHOR

...view details