ಕರ್ನಾಟಕ

karnataka

ETV Bharat / sports

ಕೋವಿಡ್​ 19 ಪರೀಕ್ಷೆಗೆ ಒಳಗಾದ ಎಂಎಸ್​ ಧೋನಿ: ಇಂದು ಫಲಿತಾಂಶ ಬರುವ ಸಾಧ್ಯತೆ

ಯುಎಇಗೆ ತೆರಳುವ ಮುನ್ನ ಸಿಎಸ್​ಕೆ ಆಟಗಾರರು ಚೆನ್ನೈಗೆ ಬರಬೇಕಿದೆ. ಈ ವೇಳೆ, ಎರಡು ಬಾರಿ ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಪಡೆಯಬೇಕಿದೆ. ಚೆನ್ನೈಗೆ ತೆರಳಿದ ನಂತರ ಮತ್ತೆ ಮೂರು ಬಾರಿ ಕೋವಿಡ್​ 19 ಪರೀಕ್ಷೆಗೆ ಒಳಗಾಗಲಿದ್ದಾರೆ. ಒಟ್ಟು 5 ಬಾರಿ ಕೋವಿಡ್​ ಟೆಸ್ಟ್​ನಲ್ಲಿ ಭಾಗಿಯಾದ ನಂತರ ಯುಎಇಗೆ ಹಾರಲಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : Aug 13, 2020, 1:35 PM IST

ರಾಂಚಿ:ಯುಎಇಗೆ ತೆರಳಲಿರುವ ಮುನ್ನ 5 ಬಾರಿ ಕೋವಿಡ್​ 19 ಪರೀಕ್ಷೆಗೆ ಒಳಗಾಗಬೇಕಾಗಿರುವುದರಿಂದ ಚೆನ್ನೈ ಸೂಪರ್​ಕಿಂಗ್ಸ್​ ನಾಯಕ ಎಂಎಸ್​ ಧೋನಿ ಬುಧವಾರ ಪರೀಕ್ಷೆಗೆ ಒಳಗಾಗಿದ್ದಾರೆ.

ಯುಎಇಗೆ ತೆರಳುವ ಮುನ್ನ ಸಿಎಸ್​ಕೆ ಆಟಗಾರರು ಚೆನ್ನೈಗೆ ಬರಬೇಕಿದೆ. ಈ ವೇಳೆ ಎರಡು ಬಾರಿ ಎಲ್ಲ ಆಟಗಾರರು ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಪಡೆಯಬೇಕಿದೆ. ಚೆನ್ನೈಗೆ ತೆರಳಿದ ನಂತರ ಮತ್ತೆ ಮೂರು ಬಾರಿ ಕೋವಿಡ್​ 19 ಪರೀಕ್ಷೆಗೆ ಒಳಗಾಗಲಿದ್ದಾರೆ. ಒಟ್ಟು 5 ಬಾರಿ ಕೋವಿಡ್​ ಟೆಸ್ಟ್​ನಲ್ಲಿ ಭಾಗಿಯಾದ ನಂತರ ಯುಎಇಗೆ ಹಾರಲಿದ್ದಾರೆ.

ಭಾರತ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕನಾಗಿರುವ ಎಂಎಸ್ ಧೋನಿ ಬುಧವಾರ ರಾಂಚಿಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ. ಫಲಿತಾಂಶ ಗುರುವಾರ ಬರುವ ನಿರೀಕ್ಷೆಯಿದೆ.

39 ವರ್ಷದ ಧೋನಿ 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ ಬಳಿಕ ಯಾವುದೇ ಮಾದರಿಯ ಕ್ರಿಕೆಟ್​​​​ನಲ್ಲೂ ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಭಾರತದ ವಿಕೆಟ್​ ಕೀಪಿಂಗ್ ಜವಾಬ್ದಾರಿಯನ್ನು ರಿಷಭ್​ ಪಂತ್​ ಹಾಗೂ ಕೆಎಲ್​ ರಾಹುಲ್ ನಿರ್ವಹಿಸುತ್ತಿದ್ದಾರೆ.

ಇನ್ನು ಧೋನಿ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು 10 ಬಾರಿ ಮುನ್ನಡೆಸಿದ್ದು, 10 ಬಾರಿ ಪ್ಲೇ ಆಫ್​​, 8 ಬಾರಿ ಫೈನಲ್​ ಹಂತಕ್ಕೆ ಕೊಂಡೊಯ್ದಿದ್ದಾರೆ. ಅದರಲ್ಲಿ 3 ಬಾರಿ ಚಾಂಪಿಯನ್​ ಹಾಗೂ 5 ಬಾರಿ ರನ್ನರ್​ ಅಪ್​ ಆಗಿದ್ದಾರೆ.

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳುವ ಐಪಿಎಲ್ ಟೂರ್ನಿಯ ಪಂದ್ಯಗಳು ದುಬೈ, ಅಬುಧಾಬಿ ಮತ್ತು ಶಾರ್ಜಾ ತಾಣಗಳಲ್ಲಿ ನಡೆಯಲಿವೆ. ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ.

ABOUT THE AUTHOR

...view details