ಜೋಹಾನ್ಬರ್ಗ್ :ದಕ್ಷಿಣ ಆಫ್ರಿಕಾದ ಸೀಮಿತ ಓವರ್ಗಳ ನಾಯಕ ಕ್ವಿಂಟನ್ ಡಿಕಾಕ್ಗೆ ಕೆಲಸದ ಒತ್ತಡ ಕಡಿಮೆ ಮಾಡಲು ಸಿಎಸ್ಎ ಮ್ಯಾನೇಜ್‌ಮೆಂಟ್ ಟೆಸ್ಟ್ ತಂಡದ ನಾಯಕತ್ವಕ್ಕೆ ಬೇರೊಬ್ಬರನ್ನು ಹುಡುಕುತ್ತಿದೆ ಎಂದು ಕೋಚ್ ಮಾರ್ಕ್ ಬೌಷರ್ ಹೇಳಿದ್ದಾರೆ.
ಫೆಬ್ರವರಿ 17ರಂದು ದಕ್ಷಿಣ ಆಫ್ರಿಕಾದ ಟಿ20 ಮತ್ತು ಟೆಸ್ಟ್ ತಂಡದ ನಾಯಕತ್ವಕ್ಕೆ ಫಾಫ್ ಡು ಪ್ಲೆಸಿಸ್ ರಾಜಿನಾಮೆ ನೀಡಿದ್ದರು. ಕೋಚ್ ಬೌಷರ್ ಪ್ರಕಾರ ಟೆಸ್ಟ್ ತಂಡದ ನಾಯಕನ ಸ್ಥಾನ ಭರ್ತಿಯಾಗಿಲ್ಲ. ಕ್ವಿಂಟನ್ ಡಿ ಕಾಕ್ ಹರಿಣಗಳ ಟೆಸ್ಟ್ ತಂಡವನ್ನು ಮುನ್ನಡೆಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಕ್ವಿಂಟನ್ಗೆ ಕೆಲಸದ ಹೊರೆ ತುಂಬಾ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಟಿ20 ಮತ್ತು ಏಕದಿನ ತಂಡದ ನಾಯಕರಾದ ಮೇಲೆ ಹಲವು ಪಂದ್ಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿದ್ದಾರೆ. ಭಾರತದ ವಿರುದ್ಧದ ಸರಣಿಯ ವೇಳೆ ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಅವರು ತಮಗೆ ಕೆಲಸದ ಹೊರೆ ಹೆಚ್ಚಾಗಲಿದೆ ಎಂದು ಹೇಳಿದ್ದರು.
ಇನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಯಾರೇ ನಾಯಕನಾಗಿ ಆಯ್ಕೆಯಾದರು ಅವರು ವಿಕೆಟ್ ಕೀಪರ್ ಆಗಿರುವ ಕ್ವಿಂಟನ್ ಬ್ರೈನ್ ಬಳಸಿಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಡಿಕಾಕ್ ತಂಡದಲ್ಲಿ ಇದ್ದರೆ ಮೌಲ್ಯ ಕೂಡ ಹೆಚ್ಚಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಿಎಸ್ಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.