ಕರ್ನಾಟಕ

karnataka

ETV Bharat / sports

ಅಂಪೈರಿಂಗ್​​ ಮಹಾಪ್ರಮಾದ...!  ಬದಲಾವಣೆಗೆ ನಾಂದಿ ಹಾಡುತ್ತಾ ಮಲಿಂಗಾ ನೋಬಾಲ್​​..? - ಚಿನ್ನಸ್ವಾಮಿ ಮೈದಾನ

ಖ್ಯಾತ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಕೆವಿನ್ ಪೀಟರ್​​ಸನ್​​, ಮೊಹಮ್ಮದ್ ಕೈಫ್, ಮೈಕಲ್ ವಾನ್​​, ಡೀನ್ ಜೋನ್ಸ್​, ಸಂಜಯ್ ಮಾಂಜ್ರೇಕರ್​​, ಆಕಾಶ್ ಚೋಪ್ರಾ, ಪ್ರಗ್ಯಾನ್ ಓಜ್ಹಾ ಹಾಗೂ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವಿಟರ್ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಲಿಂಗ ನೋಬಾಲ್

By

Published : Mar 29, 2019, 7:10 PM IST

ಹೈದರಾಬಾದ್:ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿನ ಮಲಿಂಗಾ ಎಸೆದ ಕೊನೆಯ ಎಸೆತ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಒಳಗಾಗುತ್ತಿದೆ.

ವಿವಾದಕ್ಕೆ ಕಾರಣವಾದ ಎಸೆತ

ಪಂದ್ಯದ ಬಳಿಕ ಕೊಹ್ಲಿ ಹಾಗೂ ವಿಜೇತ ತಂಡದ ನಾಯಕ ರೋಹಿತ್ ಶರ್ಮ ಸಹ ಮಹಾ ಪ್ರಮಾದವನ್ನು ಖಂಡಿಸಿದ್ದರು. ಸದ್ಯ ಹಿರಿಯ ಕ್ರಿಕೆಟಿಗರು ಸಹ ಅಂಪೈರ್​ ಯಡವಟ್ಟನ್ನು ಖಂಡನೆ ಮಾಡುತ್ತಿದ್ದಾರೆ.

ಖ್ಯಾತ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಕೆವಿನ್ ಪೀಟರ್​​ಸನ್​​, ಮೊಹಮ್ಮದ್ ಕೈಫ್, ಮೈಕಲ್ ವಾನ್​​, ಡೀನ್ ಜೋನ್ಸ್​, ಸಂಜಯ್ ಮಾಂಜ್ರೇಕರ್​​, ಆಕಾಶ್ ಚೋಪ್ರಾ, ಪ್ರಗ್ಯಾನ್ ಓಜಾ ಹಾಗೂ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವಿಟರ್ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಮಹತ್ವದ ಘಟ್ಟದಲ್ಲಿ ಅಂಪೈರಿಂಗ್​ ಇನ್ನಷ್ಟು ಪರಿಣಾಮಕಾರಿಯಾಗಿ ಎಲ್ಲವನ್ನೂ ಗಮನಿಸಬೇಕು. ಜೊತೆಗೆ ಮೂರನೇ ಅಂಪೈರ್​​ ರಿಪ್ಲೆಯನ್ನು ನೋಡಬೇಕು ಎಂದು ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ನಿಲುವು ಮುಂದಿಟ್ಟಿದ್ದಾರೆ. ಅಂಪೈರಿಂಗ್ ಮತ್ತಷ್ಟು ಪಕ್ವವಾಗಬೇಕು ಎಂದು ಒತ್ತಾಯಪಡಿಸಿದ್ದಾರೆ. ವಿಡಿಯೋ ರಿಪ್ಲೇಯನ್ನು ನೋಡಿಕೊಳ್ಳಲು ಓರ್ವನನ್ನು ನೇಮಕ ಮಾಡಬೇಕು. ಆತ ನೇರವಾಗಿ ಮೈದಾನದ ಅಂಪೈರ್​​ಗೆ ಇಯರ್​​​ಫೋನ್​ ಮೂಲಕ ತಕ್ಷಣವೇ ತಿಳಿಸುವಂತೆ ಮಾಡುವಂತೆ ಹೊಸ ನಿಯಮ ಜಾರಿಗೆ ತರಬೇಕು ಎನ್ನುವ ಕೂಗು ಕೇಳಿಬಂದಿದೆ.

ಅಂಪೈರಿಂಗ್ ಪ್ರಮಾದದಿಂದ ಆರ್​ಸಿಬಿ ಕೊನೇಕ್ಷಣದಲ್ಲಿ ಸೋಲುಭವಿಸಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೇ ಎಸೆತದಲ್ಲಿ ಆರ್​ಸಿಬಿಗೆ ಏಳು ರನ್​ಗಳ ಅವಶ್ಯಕತೆ ಇತ್ತು. ಬೌಲಿಂಗ್ ಮಾಡುತ್ತಿದ್ದ ಲಸಿತ್ ಮಲಿಂಗಾ ಎಸೆದ ಕೊನೆಯ ಚೆಂಡು ನೋಬಾಲ್ ಆಗಿದ್ದನ್ನು ಅಂಪೈರ್​ ಎಸ್​.ರವಿ ಗಮನಿಸಿರಲಿಲ್ಲ. ಆದರೆ ಪಂದ್ಯ ಮುಕ್ತಾಯ ಬಳಿಕ ರಿಪ್ಲೇನಲ್ಲಿ ಮಲಿಂಗಾ ಎಸೆತ ನೋಬಾಲ್ ಆಗಿದ್ದು ಸ್ಪಷ್ಟವಾಗಿತ್ತು.

ಪಂದ್ಯದ ಬಳಿಕ ತೀವ್ರ ಆಕ್ರೋಶಭರಿತರಾಗಿ ಕೊಹ್ಲಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದು ಗಲ್ಲಿ ಕ್ರಿಕೆಟ್​ ಅಲ್ಲ, ಇದು ಐಪಿಎಲ್​. ಇಲ್ಲಿಅಂಪೈರ್​ಗಳು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸಬೇಕು ಎಂದು ಕಿಡಿಕಾರಿದ್ದರು.

ABOUT THE AUTHOR

...view details