ಚೆನ್ನೈ :ಬಹಳಷ್ಟು ಕ್ರಿಕೆಟಿಗರು ತಮ್ಮ ಆಟವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ ಎಂದು ಧೋನಿ ನಾಯಕತ್ವದಲ್ಲಿ ಆಡಲು ಬಯಸುತ್ತಾರೆ ಎಂದು ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಹೇಳಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಅಲಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 7 ಕೋಟಿ ರೂ. ನೀಡಿ ಖರೀದಿಸಿದೆ. ಈಗಾಗಲೇ ಮುಂಬೈನಲ್ಲಿ ಸಿಎಸ್ಕೆ ತಂಡ ಸೇರಿರುವ ಅವರು ಧೋನಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಾನು ಧೋನಿ ನಾಯಕತ್ವದಲ್ಲಿ ಆಡಿರುವ ಕೆಲವು ಆಟಗಾರರ ಜೊತೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ಧೋನಿ ತಮ್ಮ ಆಟವನ್ನು ಹೇಗೆ ಸುಧಾರಿಸಿಕೊಳ್ಳುತ್ತಾರೆ ಎಂದು ನನಗೆ ಹೇಳಿದ್ದಾರೆ. ಹಾಗಾಗಿ, ಒಬ್ಬ ಮಹಾನ್ ನಾಯಕ ಅದನ್ನು ಮಾಡುತ್ತಾನೆ ಎಂದು ನಾನು ನಂಬಿದ್ದೇನೆ" ಎಂದು ಮೊಯಿನ್ ಅಲಿ ತಿಳಿಸಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಆಡುವುದಕ್ಕೆ ಎಲ್ಲಾ ಆಟಗಾರರು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ತಮ್ಮ ಜೊತೆಗೆ ಆಡುವವರಿಗೆ ಆ ರೀತಿಯ ಆತ್ಮವಿಶ್ವಾಸವನ್ನು ಮೂಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ತನಗೂ ಕೂಡ ತುಂಬಾ ಉತ್ಸಾಹವಿದೆ ಎಂದು ಇಂಗ್ಲೆಂಡ್ ಆಲ್ರೌಂಡರ್ ಹೇಳಿದ್ದಾರೆ.
ತಾಳ್ಮೆಯಿಂದಿರಲು ಬಲವಾದ ನಾಯಕತ್ವ ಮತ್ತು ಕೋಚ್ಗಳನ್ನು ಹೊಂದಿರುವುದು ತುಂಬಾ ಮಹತ್ವವಾಗಿರುತ್ತದೆ. ಯಾಕೆಂದರೆ, ಅವರು ಆಟಗಾರರ ಒತ್ತಡವನ್ನು ಎಷ್ಟು ಸಾಧ್ಯವೋ ಅಷ್ಟು ತೆಗೆದುಕೊಳ್ಳುತ್ತಾರೆ ಮತ್ತು ಸ್ಥಿರವಾಗಿರುತ್ತಾರೆ. ಸಿಎಸ್ಕೆ ಸ್ಪರ್ಧೆಯಲ್ಲಿ ಗೆಲ್ಲಬಹುದು ಎನ್ನುವುದಕ್ಕೆ ವಾಸ್ತವವಿದೆ. ಅಂತಹ ಆಟಗಾರರಿರುವ ತಂಡದಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ ಎಂದು 33 ವರ್ಷದ ಆಲ್ರೌಂಡರ್ ತಿಳಿಸಿದ್ದಾರೆ.