ಆಗ್ರಾ( ಉತ್ತರಪ್ರದೇಶ):ಭಾರತದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಇಂದು ಮಧ್ಯಾಹ್ನ ತಮ್ಮ ಕುಟುಂಬಸ್ಥರೊಂದಿಗೆ ತಾಜ್ಮಹಲ್ಗೆ ಭೇಟಿ ನೀಡಿದರು.
ಕುಟುಂಬಸ್ಥರೊಂದಿಗೆ ವಿ.ವಿ.ಎಸ್ ಲಕ್ಷ್ಮಣ್ ತಾಜ್ಮಹಲ್ ವೀಕ್ಷಣೆ! - ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್
ಭಾರತದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಇಂದು ಮಧ್ಯಾಹ್ನ ತಮ್ಮ ಕುಟುಂಬಸ್ಥರೊಂದಿಗೆ ತಾಜ್ಮಹಲ್ಗೆ ಭೇಟಿ ನೀಡಿ, ಸುಮಾರು ಒಂದು ಗಂಟೆಗಳ ಕಾಲ ತಾಜ್ಮಹಲ್ ವೀಕ್ಷಿಸಿ, ಸಂಭ್ರಮಿಸಿದರು.
ಭಾರತದ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್ ಕುಟುಂಬಸ್ಥರೊಂದಿಗೆ ತಾಜ್ಮಹಲ್ ವೀಕ್ಷಣೆ!
ಒಂದು ಗಂಟೆಗಳ ಕಾಲ ತಾಜ್ ಮಹಲ್ ವೀಕ್ಷಣೆ ಮಾಡಿದ ಲಕ್ಷ್ಮಣ್ ಕುಟುಂಬ ಮಾರ್ಗದರ್ಶಕರಿಂದ ತಾಜ್ ಮಹಲ್ನ ಇತಿಹಾಸವನ್ನು ತಿಳಿದುಕೊಂಡರು. ಈ ವೇಳೆ ವಿ.ವಿ.ಎಸ್ ಲಕ್ಷ್ಮಣ್ ಅವರ ಅಭಿಮಾನಿಗಳು ಹಾಗೂ ಪ್ರವಾಸಿಗರು ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು.
ಇನ್ನೂ ಇತರ ಪ್ರವಾಸಿಗರಂತೆ ಲಕ್ಷ್ಮಣ್ ಕುಟುಂಬಸ್ಥರು ಕೂಡಾ ಡಯಾನಾ ಸೀಟಿನ ಬಗ್ಗೆ ಆಕರ್ಷಿತರಾಗಿ, ಅಲ್ಲಿ ವಿಭಿನ್ನ ರೀತಿಯಲ್ಲಿ ಫೋಟೋ ತೆಗೆಸಿಕೊಂಡರು.