ಮುಂಬೈ/ ಹೈದರಾಬಾದ್ : ಪ್ರಸ್ತುತ ಅತ್ಯಂತ ಹಿರಿಯ ಕ್ರಿಕೆಟಿಗರೆನಿಸಿರುವ ವಸಂತ್ ರೈಜಿ ಇಂದು ನೂರನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಭಾರತದ ಕ್ರಿಕೆಟ್ ಗಾಡ್ ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವ್ಯಾಗ್ ಅವರು, ವಸಂತ್ ರೈಜಿ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು...
ವಸಂತ್ ರೈಜಿ ಅವರಿಗೆ ಬಾಲ್ಯದಿಂದಲೇ ಕ್ರಿಕೆಟ್ ಆಡುವ ಆಸೆ ವಿಪರೀತವಾಗಿತ್ತು. ಕ್ರಿಕೆಟ್ನಲ್ಲಿಯೇ ಏನಾದರೂ ಸಾಧನೆ ಮಾಡುವ ಮಹದಾಸೆ ಹೊಂದಿದ್ದ ಅವರು ಇದಕ್ಕಾಗಿ ಮಾಡಿದ ಸಾಹಸ ಅಷ್ಟಿಷ್ಟಲ್ಲ.
ನೂರನೇ ವರ್ಷದ ಜನ್ಮ ದಿನಾಚರಣೆಯಲ್ಲಿ ವಸಂತ್ ರೈಜಿ ಅದು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿನ ಕತೆ. ಗುಜರಾತ್ನ ಬರೋಡಾದಲ್ಲಿ 1920 ರಲ್ಲಿ ಜನಿಸಿದ ವಸಂತ್ ರೀಜೈ ತಮ್ಮ 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
1940ರಲ್ಲಿ ಮೊದಲ ಪಂದ್ಯವನ್ನಾಡಿದರು. ಇವರು ಬರೋಡಾ ಮತ್ತು ಬಾಂಬೆ (ಈಗ ಮುಂಬೈ) ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಬಲಗೈ ಬ್ಯಾಟ್ಸ್ಮನ್ ಆಗಿರುವ ರೈಜಿ, 1940ರಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ 9 ಪಂದ್ಯಗಳಲ್ಲಿ ವಸಂತ್ ರೈಜಿ 23 ರ ಸರಾಸರಿಯಲ್ಲಿ 277ರನ್ ಗಳಿಸಿದ್ದು, 68 ರನ್ ಇವರ ಅತ್ಯಧಿಕ ಸ್ಕೋರ್ ಕೂಡಾ ಆಗಿದೆ.
ಇವರು ಭಾರತದಲ್ಲಿರುವ ಅತ್ಯಂತ ಹಿರಿಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.