ನವದೆಹಲಿ: ಕ್ರಿಕೆಟಿಗ ಸುರೇಶ್ ರೈನಾ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದೆ.
ಸುರೇಶ್ ರೈನಾಗೆ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ: ಶೀಘ್ರ ಗುಣಮುಖರಾಗುವಂತೆ ಬಿಸಿಸಿಐ ಹಾರೈಕೆ! - knee surgery for Suresh Raina
ಕ್ರಿಕೆಟಿಗ ಸುರೇಶ್ ರೈನಾಗೆ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ಧಾರೆ.
ರೈನಾಗೆ ಕಳೆದ ಕೆಲ ತಿಂಗಳುಗಳಿಂದ ಆಗಾಗ ಮೊಣಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸುರೇಶ್ ರೈನಾ, ಗುಣಮುಖರಾಗಲು 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯವಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ರೈನಾ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದೆ.
ಇನ್ನು 18 ಟೆಸ್ಟ್ ಹಾಗೂ 226 ಏಕದಿನ ಪಂದ್ಯಗಳನ್ನಾಡಿರುವ ರೈನಾ, ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ದೇಶಿ ಕ್ರಿಕೆಟ್ ಹಾಗೂ ಟಿ-20 ಲೀಗ್ಗಳಲ್ಲಿ ಮಾತ್ರ ಸೀಮಿತರಾಗಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲೂ ಕೂಡ ಅವರು ತಂಡದಲ್ಲಿರಲಿಲ್ಲ.