ಕರ್ನಾಟಕ

karnataka

ETV Bharat / sports

ಬುರ್ಜ್ ಖಲೀಫಾ ಬಗ್ಗೆ ರೈನಾ ರ‍್ಯಾಪ್‌ ಸಾಂಗ್ ಹೇಗಿದೆ ಗೊತ್ತಾ!? - ರೈನಾ ರ‍್ಯಾಪ್‌ ಸಾಂಗ್ ಸುದ್ದಿ

ಬುರ್ಜ್ ಖಲೀಫಾ ಬಗ್ಗೆ ರೈನಾ ರ‍್ಯಾಪ್‌ ಸಾಂಗ್ ಹಾಡಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Suresh Raina sing a rap song, Suresh Raina sing a rap song news, Suresh Raina rap song, Suresh Raina rap song news, ಬುರ್ಜ್ ಖಲೀಫಾ ಬಗ್ಗೆ ರೈನಾ  ರ‍್ಯಾಪ್‌ ಸಾಂಗ್, ಬುರ್ಜ್ ಖಲೀಫಾ ಬಗ್ಗೆ ರೈನಾ  ರ‍್ಯಾಪ್‌ ಸಾಂಗ್ ಸುದ್ದಿ, ರೈನಾ  ರ‍್ಯಾಪ್‌ ಸಾಂಗ್, ರೈನಾ  ರ‍್ಯಾಪ್‌ ಸಾಂಗ್ ಸುದ್ದಿ,
ರೈನಾ ರ‍್ಯಾಪ್‌ ಸಾಂಗ್

By

Published : Aug 26, 2020, 2:26 PM IST

ದುಬೈ: ಸೆಪ್ಟಂಬರ್​ 19ರಿಂದ ಅರಬ್​​ ದೇಶ ದುಬೈನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಎಲ್ಲ ಪ್ರಾಂಚೈಸಿಗಳು ಸಜ್ಜಾಗಿದ್ದು, 8 ತಂಡಗಳು ದುಬೈ ಸೇರಿಕೊಂಡಿವೆ.

ಕೊರೊನಾ ಮಹಾಮಾರಿ ಸಂಬಂಧ ಆಟಗಾರರು ಆರು ದಿನ ಕ್ವಾರಂಟೈನ್​ನಲ್ಲಿರಬೇಕೆಂಬ ನಿಬಂಧನೆ ಇದೆ. ಆದ್ರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಸುರೇಶ್​ ರೈನಾ ರ‍್ಯಾಪ್‌ ಸಾಂಗ್​ ಹಾಡಿದ್ದಾರೆ. ಈ ರ‍್ಯಾಪ್‌ ಸಾಂಗ್​ನಲ್ಲಿ ಆಟದ ಜೊತೆ ಬುರ್ಜ್ ಖಲೀಫಾ​ ಕಟ್ಟಡದ ಬಗ್ಗೆ ಹಾಡಿ ಹೊಗಳಿದ್ದಾರೆ.

ಈ ರ‍್ಯಾಪ್‌ ಸಾಂಗ್​ನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ‘ಕ್ವಾರಂಟೈನ್​ ಸಮಯದಲ್ಲಿ ನಾನು ಇದೇ ಮಾಡಬೇಕಾಗುತ್ತೆ. ವಿಡಿಯೋ ರೆಕಾರ್ಡ್​ ಮಾಡಿ ಎಲ್ಲರನ್ನು ಸಂತೋಷಪಡಿಸುವುದೇ ನನ್ನ ಕೆಲಸ. ಈ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಹೇಳಿ’ ಅಂತಾ ಸುರೇಶ್​ ರೈನಾ ಕ್ಯಾಪ್ಷನ್​ ಹಾಕಿದ್ದಾರೆ.

ಕ್ವಾರಂಟೈನ್​ ಸಮಯದಲ್ಲಿ ಜಿಮ್​ ಮಾಡುತ್ತಾ, ದಿನ ಪೂರ್ತಿ ನೆಟ್​ಫ್ಲೆಕ್ಸ್​ನಲ್ಲಿ ಕಳೆಯುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಸೂಪರ್​ ಕಿಂಗ್ಸ್​ ಆಟಗಾರ ಸುರೇಶ್​ ರೈನಾ.

ಸುರೇಶ್​ ರೈನಾ ಮೊದಲಿನಿಂದಲೂ ಸಂಗೀತದ ಮೇಲೆ ಆಸಕ್ತಿ ಹೊಂದಿರುವುದು ತಿಳಿದಿರುವ ಸಂಗತಿ.

ABOUT THE AUTHOR

...view details