ಕರ್ನಾಟಕ

karnataka

ETV Bharat / sports

ಸಂಜನಾಗೆ ಜಸ್ಪ್ರೀತ್ ಕ್ಲೀನ್ ಬೌಲ್ಡ್‌! ಬದುಕಿನ 2ನೇ ಇನ್ನಿಂಗ್ಸ್‌ ಆರಂಭಿಸಿದ ಬುಮ್ರಾ

ಟೀಂ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಅದರ ಫೋಟೋ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

Cricketer Jasprit Bumrah
Cricketer Jasprit Bumrah

By

Published : Mar 15, 2021, 4:08 PM IST

Updated : Mar 15, 2021, 4:38 PM IST

ಗೋವಾ:ಟೀಂ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಿರೂಪಕಿ ಸಂಜನಾ ಗಣೇಶನ್​ ಜೊತೆ ಸಪ್ತಪದಿ ತುಳಿದಿದ್ದಾರೆ. ಸದ್ದಿಲ್ಲದೆ ಗೋವಾದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೇಗಿ

ಪ್ರಖ್ಯಾತ ಕ್ರೀಡಾ ನಿರೂಪಕಿ ಆಗಿರುವ ಸಂಜನಾ ಗಣೇಶನ್​​ 2014ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು. ಇದಾದ ಬಳಿಕ ಸ್ಟಾರ್​ ಸ್ಪೋರ್ಟ್ಸ್​​ ವಾಹಿನಿಯಲ್ಲಿ ಕ್ರೀಡಾ ಕಾರ್ಯಕ್ರಮದ ನಿರೂಪಕಿಯಾಗಿ ಹೆಸರುವಾಸಿಯಾಗಿದ್ದಾರೆ. ಐಪಿಎಲ್​, ಬ್ಯಾಡ್ಮಿಂಟನ್​ ಲೀಗ್​ಗಳ ನಿರೂಪಣೆ ಮಾಡುವ ಇವರು, 2019ರ ಕ್ರಿಕೆಟ್​ ವಿಶ್ವಕಪ್​ ವೇಳೆ ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಸಂಜನಾ ಗಣೇಶನ್​ ಜೊತೆ ಮದುವೆ

2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಜಸ್ಪ್ರೀತ್‌ ಬುಮ್ರಾ, ಐದು ವರ್ಷಗಳ ಬಳಿಕ ಮೂರೂ ಸ್ವರೂಪದ ಕ್ರಿಕೆಟ್‌ನಲ್ಲಿಯೂ ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಸರಣಿಯ ಕೊನೆಯ ಟೆಸ್ಟ್​ನಿಂದ ರಜೆ ಪಡೆದ ಬುಮ್ರಾ, ಸದ್ಯ ಇಂಗ್ಲೆಂಡ್​ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ರಜೆ ಪಡೆದುಕೊಂಡಿದ್ದಾರೆ.

Last Updated : Mar 15, 2021, 4:38 PM IST

ABOUT THE AUTHOR

...view details