ಕ್ರೈಸ್ಟ್ಚರ್ಚ್: ಒಂದು ವರ್ಷದಿಂದ ಮಿದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್‌ಸ್ಟೋಕ್ಸ್ ಅವರ ತಂದೆ ಗೆರಾರ್ಡ್ ಗೆಡ್ ಸ್ಟೋಕ್ಸ್ ಮಂಗಳವಾರ ನಿಧನರಾದರು.
65 ವರ್ಷ ವಯಸ್ಸಿನ ಗೆಡ್ ಸ್ಟೋಕ್ಸ್ ಕಳೆದ ಒಂದು ವರ್ಷದಿಂದಲೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಈ ಕಾರಣಕ್ಕಾಗಿ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ, ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ಗಳ ಸರಣಿ ಮತ್ತು ಐಪಿಎಲ್ನ ಮೊದಲಾರ್ಧದ ಪಂದ್ಯಗಳಿಂದ ಹೊರಗುಳಿದು ತಂದೆಯ ಜೊತೆ ಕೆಲ ಸಮಯ ಕಳೆದಿದ್ದರು.
ತಂದೆ ತಾಯಿಯ ಜೊತೆ ಬೆನ್ ಸ್ಟೋಕ್ಸ್
ಪ್ರಸ್ತುತ ಬೆನ್ ಸ್ಟೋಕ್ಸ್ ರಾಷ್ಟ್ರೀಯ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಏಕದಿನ ಸರಣಿ ರದ್ಧಾಗಿದ್ದು, ಮಂಗಳವಾರ ಅವರ ಕೋವಿಡ್ 19 ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಇಂದು ದಕ್ಷಿಣ ಅವರು ಆಫ್ರಿಕಾದಿಂದ ತವರಿಗೆ ಪ್ರಯಾಣ ಬೆಳಸಬೇಕಿತ್ತು. ಇದೀಗ ತಂದೆ ಸಾವಿನ ಹಿನ್ನೆಲೆಯಲ್ಲಿ ಅವರು ನ್ಯೂಜಿಲ್ಯಾಂಡ್ಗೆ ನೇರವಾಗಿ ಆಗಮಿಸುವ ಸಾಧ್ಯತೆ ಇದೆ. ಆದರೆ ನ್ಯೂಜಿಲ್ಯಾಂಡ್ನಲ್ಲಿ ಕೋವಿಡ್ ನಿಯಮಗಳ ಪ್ರಕಾರ 14 ದಿನಗಳ ಕ್ವಾರಂಟೈನ್ ಇರುವುದರಿಂದ ತಂದೆ ಅಂತಿಮ ಸಂಸ್ಕಾರಕ್ಕೆ ಹಾಜರಾಗುವ ಸಾಧ್ಯತೆ ಕೂಡ ಕಡಿಮೆಯಿದೆ.
ಓದಿ: ಮೊದಲ ಟೆಸ್ಟ್ನಿಂದ ಡೇವಿಡ್ ವಾರ್ನರ್ ಔಟ್