ಜೋಹಾನ್ಸ್‌ಬರ್ಗ್ :ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯಲ್ಲಿ ಏಳು ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕ್ರಿಕೆಟ್ ಸಂಸ್ಥೆಯ ಸಿಇಒ ಜಾಕ್ವೆಸ್ ಫೌಲ್ ತಿಳಿಸಿದ್ದಾರೆ. ಕ್ರಿಕೆಟ್ ಸೌತ್ ಆಫ್ರಿಕಾ ದೇಶಾದ್ಯಂತ 100ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ನಡೆಸಿತು. ಇದರಲ್ಲಿ ಅಂಗಸಂಸ್ಥೆ ಸಿಬ್ಬಂದಿ ಮತ್ತು ಕೆಲವು ಗುತ್ತಿಗೆ ಪಡೆದ ವೃತ್ತಿಪರ ಆಟಗಾರರು ಸೇರಿದ್ದಾರೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್.. 7 ಮಂದಿಗೆ ಕೊರೊಸಾ ಸೋಂಕು ದೃಢ - ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೇಟೆಸ್ಟ್ ನ್ಯೂಸ್
100ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ ನಂತರ ಏಳು ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಿಇಒ ಜಾಕ್ವೆಸ್ ಫೌಲ್ ಹೇಳಿದ್ದಾರೆ. ಸೋಂಕಿಗೆ ತುತ್ತಾಗಿರುವವರಲ್ಲಿ ದಕ್ಷಿಣ ಆಫ್ರಿಕಾದ ಯಾವುದಾದರು ಆಟಗಾರರು ಇದ್ದಾರೆಯೇ ಎಂಬ ಬಗ್ಗೆ ಫೌಲ್ ಮಾಹಿತಿ ನೀಡಿಲ್ಲ..

ದಕ್ಷಿಣ ಆಫ್ರಿಕಾ ಕ್ರಿಕೆಟ್
100ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ ನಂತರ ಏಳು ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಿಇಒ ಜಾಕ್ವೆಸ್ ಫೌಲ್ ಹೇಳಿದ್ದಾರೆ. ಸೋಂಕಿಗೆ ತುತ್ತಾಗಿರುವವರಲ್ಲಿ ದಕ್ಷಿಣ ಆಫ್ರಿಕಾದ ಯಾವುದಾದರು ಆಟಗಾರರು ಇದ್ದಾರೆಯೇ ಎಂಬ ಬಗ್ಗೆ ಫೌಲ್ ಮಾಹಿತಿ ನೀಡಿಲ್ಲ.
ಸೋಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ನಮ್ಮ ವೈದ್ಯಕೀಯ ನೈತಿಕ ಪ್ರೋಟೋಕಾಲ್ ಅನುಮತಿಸುವುದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ನಾಯಕ ಮಶ್ರಫೆ ಮೊರ್ತಾಜ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಕೂಡ ಸೋಂಕಿಗೆ ತುತ್ತಾಗಿದ್ದರು.