ಕರ್ನಾಟಕ

karnataka

ETV Bharat / sports

ಮತ್ತೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಲಿದ್ದಾರೆ ಮಿಸ್ಟರ್​ 360 - South Africa Cricket

360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್​ ಅವರನ್ನು ಸ್ವತಃ ದಕ್ಷಿಣ ಆಫ್ರಿಕಾ ಮಂಡಳಿಯೇ ತಂಡಕ್ಕೆ ವಾಪಸ್​ ಆಗಿ ನಾಯಕತ್ವ ವಹಿಸುವಂತೆ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.

ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್

By

Published : Apr 29, 2020, 4:48 PM IST

ಮುಂಬೈ: ದಕ್ಷಿಣ ಆಫ್ರಿಕಾ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ಎಬಿ ಡಿ ವಿಲಿಯರ್ಸ್​ ಮತ್ತೆ ಹರಿಣ ಪಡೆಯನ್ನು ಮುನ್ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್​ ರನ್ನು ಸ್ವತಃ ದಕ್ಷಿಣ ಆಫ್ರಿಕಾ ಮಂಡಳಿಯೇ ತಂಡಕ್ಕೆ ವಾಪಸ್​ ಆಗಿ ನಾಯಕತ್ವ ವಹಿಸುವಂತೆ ಕೇಳಿಕೊಂಡಿದೆ ಎಂದು ತಿಳಿದುಬಂದಿದೆ.

ವಿಲಿಯರ್ಸ್​ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಮತ್ತೆ ವಿಶ್ವಕಪ್​ ವೇಳೆ ತಂಡಕ್ಕೆ ಸೇರ್ಪಡೆಯಾಗಲು ಉತ್ಸಾಹ ತೋರಿದರಾದರೂ ದ.ಆ. ಕ್ರಿಕೆಟ್​ ಮಂಡಳಿ ಒಪ್ಪಿಗೆ ಸೂಚಿಸಿರಲಿಲ್ಲ. ನಂತರ ಮಾರ್ಕ್​ ಬೌಷರ್​ ಕೋಚ್​ ಆಗಿ ನೇಮಕಗೊಂಡ ಮೇಲೆ ಮತ್ತೆ ನಿವೃತ್ತಿಯಾಗಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಬಲಿಷ್ಠ ತಂಡ ಕಟ್ಟುವ ನಿರ್ಧಾರ ಮಾಡಿದ್ದರು.

ನನಗೂ ದಕ್ಷಿಣ ಆಫ್ರಿಕಾ ತಂಡದ ಪರ ಆಡಬೇಕೆಂಬ ಆಸೆಯಿದೆ. ಇದೀಗ ಕ್ರಿಕೆಟ್ ಮಂಡಳಿಯೇ ನನ್ನಲ್ಲಿ ಮತ್ತೆ ನಾಯಕನನ್ನಾಗುವಂತೆ ಕೇಳಿಕೊಂಡಿದೆ. ಆದರೆ ನಾನು ಫಾರ್ಮ್​ಗೆ ಮರಳಿ ಇತರೆ ಆಟಗಾರರಿಗಿಂತ ಉತ್ತಮ ಎನಿಸಿದರೆ ಮಾತ್ರ ಮತ್ತೆ ಆಡುವ 11ರಬಳಗಕ್ಕೆ ಸೇರಿಕೊಳ್ಳಲಿದ್ದೇನೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿಲಿಯರ್ಸ್​ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್​, 228 ಏಕದಿನ ಪಂದ್ಯ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 9577, ಟಿ-20 ಯಲ್ಲಿ 1672, ಟೆಸ್ಟ್​ನಲ್ಲಿ 8765 ರನ್​ಗಳಿಸಿದ್ದಾರೆ.

ABOUT THE AUTHOR

...view details