ಕರ್ನಾಟಕ

karnataka

ETV Bharat / sports

ತರಬೇತಿಗಾಗಿ 44 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ - ಹೈ ಪರ್ಪಾರ್ಮೆನ್ಸ್​ ಸ್ಕ್ವಾಡ್​

ದೀರ್ಘ ವಿರಾಮದ ನಂತರ ಕ್ರಿಕೆಟ್​ನತ್ತ ಮರಳುತ್ತಿರುವ ಕ್ರಿಕೆಟ್​ ದಕ್ಷಿಣ ಆಫ್ರಿಕಾ ತರಬೇತಿ ಶಿಬಿರವನ್ನು ಆರಂಭಿಸುತ್ತಿದ್ದು, 44 ಸದಸ್ಯರ ತಂಡ ಪ್ರಕಟಿಸಿದೆ.

Cricket South Africa
ಕ್ರಿಕೆಟ್ ದಕ್ಷಿಣ ಆಫ್ರಿಕಾ

By

Published : Jun 30, 2020, 12:45 PM IST

ಕೇಪ್​ಟೌನ್​: ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಸೋಮವಾರ 44 ಸದಸ್ಯರ ಪುರುಷರ ಉನ್ನತ ಕಾರ್ಯಕ್ಷಮತೆಯುಳ್ಳ ತರಬೇತಿ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕ್ವಿಂಟನ್​ ಡಿಕಾಕ್​, ಫಾಫ್​ ಡು ಪ್ಲೆಸಿಸ್​ ಹಾಗೂ ಕಗಿಸೋ ರಬಾಡಾ ಕೂಡ ಸೇರಿದ್ದಾರೆ.

ಕ್ರೀಡಾ, ಕಲೆ ಮತ್ತು ಸಂಸ್ಕೃತಿ ಸಚಿವ ನಾಥಿ ಮೆಥೆತ್ವಾ ಅವರ ಅನುಮೋದನೆಯ ನಂತರ ಆಟಗಾರರು ತರಬೇತಿಗೆ ಮರಳಿದ್ದಾರೆ.

ಆಟಗಾರರು ಹತ್ತಿರದ ಪ್ರಾಂಚೈಸಿ ತಂಡಗಳಿಂದ ಗುರುತಿಸಲ್ಪಟ್ಟ ತರಬೇತುದಾರರೊಂದಿಗೆ ಸಣ್ಣ ಗುಂಪುಗಳಾಗಿ ತರಬೇತಿ ಪಡೆಯಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಇಲಾಖೆಯ ಒಂದು ಅಂಗವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಬಲ್ ಡಿಸೀಸ್ (ಎನ್‌ಐಸಿಡಿ) ಅನುಮೋದಿಸಿರುವ ಹಾಗೂ ಸಿಎಸ್ಎ ಕೋವಿಡ್​ -19 ಸ್ಟೀರಿಂಗ್ ಸಮಿತಿಯು ರೂಪಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತದೆ.

ದಕ್ಷಿಣ ಆಫ್ರಿಕಾ ತಂಡ

ಸಿಎಸ್​ಎ ಘೋಷಿಸಿರುವ ಹೈ ಪರ್ಫಾರ್ಮೆನ್ಸ್ ಟ್ರೈನಿಂಗ್ ಸ್ಕ್ವಾಡ್:

ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಲುಂಗಿ ಎನ್‌ಂಗಿಡಿ,ಐಡೆನ್ ಮಾರ್ಕ್ರಾಮ್, ಜೂನಿಯರ್ ದಾಲಾ, ಥ್ಯೂನಿಸ್ ಡಿ ಬ್ರೂಯಿನ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಶಾನ್ ವಾನ್ ಬರ್ಗ್, ಡ್ವೈನ್ ಪ್ರಿಟೋರಿಯಸ್, ಹೆನ್ರಿಚ್​ ಕ್ಲಾಸೆನ್, ಟೆಂಬಾ ಬಾವುಮಾ, ರೀಝಾ ಹೆಂಡ್ರಿಕ್ಸ್, ಕಗಿಸೊ ರಬಾಡ ತಬ್ರೇಜ್ ಶಮ್ಸಿ, ವಿಯಾನ್ ಮುಲ್ಡರ್, ಜಾರ್ನ್ ಫಾರ್ಚುನ್, ಆಂಡಿಲೆ ಫೆಹ್ಲುಕ್ವಾಯೊ, ಡೇವಿಡ್ ಮಿಲ್ಲರ್, ಸಾರೆಲ್ ಎರ್ವೀ, ಖಯಾ ಜೊಂಡೋ, ಡ್ಯಾರಿನ್ ಡುಪಾವಿಲ್ಲನ್, ಕೇಶವ್ ಮಹಾರಾಜ್, ಸೆನುರಾನ್ ಮುತ್ತುಸಾಮಿ, ಕೀಗನ್ ಪೀಟರ್ಸನ್, ಇಮ್ರಾನ್ ತಾಹಿರ್, ಲುಥೊ ಮೂರ್, , ಜಾನ್-ಜಾನ್ ಸ್ಮಟ್ಸ್, ರೂಡಿ ಸೆಕೆಂಡ್, ಪೈಟ್ ವ್ಯಾನ್ ಬಿಲ್ಜಾನ್, ರೇನಾರ್ಡ್ ವ್ಯಾನ್ ಟೊಂಡರ್, ಜೆರಾಲ್ಡ್ ಕೋಟ್ಜೀ, ಪೀಟರ್ ಮಲನ್, ಜುಬೇರ್ ಹಮ್ಜಾ, ಜನ್ನೆಮನ್ ಮಲನ್, ಫಾಫ್ ಡು ಪ್ಲೆಸಿಸ್, ಟೋನಿ ಡಿ ಜೋರ್ಜಿ, ಬ್ಯೂರನ್ ಹೆಂಡ್ರಿಕ್ಸ್, ನಂಡ್ರೆ ಬರ್ಗರ್, ಜಾರ್ಜ್ ಲಿಂಡೆ ಮತ್ತು ಕೈಲ್ ವೆರೆನ್ನೆ

ABOUT THE AUTHOR

...view details