ಕರ್ನಾಟಕ

karnataka

ETV Bharat / sports

ಬರೋಬ್ಬರಿ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ​... ಜುಲೈ 8ರಿಂದ ಈ ತಂಡಗಳ ನಡುವೆ ಫೈಟ್​!

ಜುಲೈ 8ರಿಂದ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡಗಳ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆರಂಭಗೊಳ್ಳಲಿದ್ದು, ಈ ಮೂಲಕ ಉಭಯ ತಂಡಗಳು ಹೊಸ ಇತಿಹಾಸ ಬರೆಯಲಿವೆ.

cricket match
cricket match

By

Published : Jul 4, 2020, 4:51 PM IST

Updated : Jul 4, 2020, 5:16 PM IST

ಹೈದರಾಬಾದ್​:ಪ್ರಪಂಚದಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಹೀಗಾಗಿ ಕಳೆದ 117 ದಿನಗಳಿಂದ ಸಂಪೂರ್ಣವಾಗಿ ನಿಷೇಧಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್​ ಇದೀಗ ಜುಲೈ 8ರಿಂದ ಆರಂಭಗೊಳ್ಳುತ್ತಿದೆ. ವಿಶ್ವ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಅಂತರದ ಬಳಿಕ ಕ್ರಿಕೆಟ್​ ಪುನಾರಂಭಗೊಳ್ಳುತ್ತಿದೆ.

143 ವರ್ಷದ ಕ್ರಿಕೆಟ್​ ಇತಿಹಾಸದಲ್ಲಿ ಕೇವಲ ಮೂರು ಸಲ ಬಹಳಷ್ಟು ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​​ ಬಂದ್​ ಆಗಿದೆ. ಮೊದಲ ವಿಶ್ವ ಮಹಾಯುದ್ಧದ ಸಮಯದಲ್ಲಿ 2,481 ದಿನಗಳ ಕಾಲ ಕ್ರಿಕೆಟ್​ ಬ್ಯಾನ್​ ಆಗಿತ್ತು. ಇದಾದ ಬಳಿಕ 1941ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ನಡುವೆ ಮೊದಲ ಕ್ರಿಕೆಟ್​ ಪಂದ್ಯ ನಡೆದಿತ್ತು.

ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲೂ ಕ್ರಿಕೆಟ್​ ಅನೇಕ ದಿನಗಳ ಕಾಲ ಬ್ಯಾನ್​ ಆಗಿತ್ತು. ಈ ವೇಳೆ ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾ ನಡುವೆ ಕ್ರಿಕೆಟ್​ ಪಂದ್ಯ ನಡೆದಿತ್ತು. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದು ಇದೇ ಮೊದಲು. ಇದರ ಮಧ್ಯೆ ಏಷ್ಯನ್​ ಫ್ಲೋ(1957-58), ಹಾಂಗ್​ಕಾಂಗ್​ ಫ್ಲೋ(1968-69), ಭಾರತ-ಪಾಕಿಸ್ತಾನ ಯುದ್ಧ(1965 ಹಾಗೂ 1991), ಗಲ್ಫ್​ ಯುದ್ಧ(1990-1991) ಹಾಗೂ ಮುಂಬೈ ಟೆರರ್​ ಅಟ್ಯಾಕ್​(2008) ಸಮಯದಲ್ಲಿ ಕೆಲ ದೇಶಗಳ ನಡುವೆ ಕ್ರಿಕೆಟ್​ ಬ್ಯಾನ್​ ಆಗಿತ್ತು.

ಇದೀಗ ಕೊರೊನಾ ವೈರಸ್​ ಕಾರಣ ಪ್ರಪಂಚದಾದ್ಯಂತ ಸಂಪೂರ್ಣವಾಗಿ ಕ್ರಿಕೆಟ್​ ಬ್ಯಾನ್​ ಆಗಿದೆ. 13 ಮಾರ್ಚ್​ 2020ರಿಂದ ಕ್ರಿಕೆಟ್​ ಪಂದ್ಯ ಬ್ಯಾನ್​ ಆಗಿದ್ದು, ಒಟ್ಟು 52 ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳು ರದ್ದುಗೊಂಡಿವೆ. ಜುಲೈ 8ರಿಂದ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವೆ ಮೊದಲ ಟೆಸ್ಟ್​ ಪಂದ್ಯ ಆರಂಭಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರು ಚಾಲನೆ ಸಿಗಲಿದೆ.

Last Updated : Jul 4, 2020, 5:16 PM IST

ABOUT THE AUTHOR

...view details