ನವದೆಹಲಿ :ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಸಿಡ್ನಿ ಟೆಸ್ಟ್ ವೇಳೆ ಆಸ್ಟ್ರೇಲಿಯಾದ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಒಳಗಾಗಿರುವ ವಿಚಾರವನ್ನು ತೀವ್ರವಾಗಿ ಖಂಡಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಜಂಟಲ್ಮ್ಯಾನ್ ಗೇಮ್ನಲ್ಲಿ ಜನಾಂಗೀಯ ನಿಂದನೆಗೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದಾರೆ.
"ನಾವು ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದೇವೆ. ಕ್ರಿಕೆಟ್ ಒಂದು ಸಂಭಾವಿತ ಆಟ ಮತ್ತು ಈ ರೀತಿಯ ವಿಷಯಗಳಿಗೆ ಅನುವು ಮಾಡಬಾರದು ಮತ್ತು ಇದು ಸ್ವೀಕಾರಾರ್ಹವಲ್ಲ. ನಮ್ಮ ತಂಡದ ಆಡಳಿತ ಮಂಡಳಿಯೂ ಈ ವಿಷಯವನ್ನು ನಿಭಾಯಿಸುತ್ತಿದೆ.
ಬಿಸಿಸಿಐ ಮತ್ತು ಐಸಿಸಿಗೆ ಇದರ ಬಗ್ಗೆ ತಿಳಿದಿದೆ. ಜನಾಂಗೀಯ ಸ್ವಭಾವದ ಕಾಮೆಂಟ್‌ಗಳನ್ನು ಮಾಡುವುದನ್ನು ಐಸಿಸಿ ನಿಷೇಧಿಸುತ್ತದೆ ಮತ್ತು ಇದರ ಬಗ್ಗೆ ಐಸಿಸಿನಲ್ಲಿ ನಿಯಮಗಳು ಇವೆ ಎಂದು ಸುದ್ದಿ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ನ್ಯಾಯಾಲಯವು ಅದನ್ನು ಅರಿತುಕೊಂಡು ಈ ರೀತಿಯ ಘಟನೆಗಳನ್ನು ತಡೆಯಬೇಕೆಂದು ನಾನು ಭಾವಿಸುತ್ತೇನೆ. ಅಂತಹ ಕೃತ್ಯಗಳು ಕ್ರಿಕೆಟ್ನಲ್ಲಿ ಸ್ವೀಕರಾರ್ಹವಲ್ಲ. ಪ್ರತಿ ಮಂಡಳಿಯು ಅದರ ಬಗ್ಗೆ ಜಾಗೃತಿ ವಹಿಸಬೇಕು. ಅಂತಹ ಕೃತ್ಯ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಶುಕ್ಲಾ ತಿಳಿಸಿದ್ದಾರೆ.
ಇದನ್ನು ಓದಿ:ಸಿಡ್ನಿಯಲ್ಲಿ ಪ್ರೇಕ್ಷಕರಿಂದ ಬುಮ್ರಾ, ಸಿರಾಜ್ಗೆ ನಿಂದನೆ: ಬಿಸಿಸಿಐ ಆರೋಪ