ಕರ್ನಾಟಕ

karnataka

ETV Bharat / sports

ಭಾರತದ ವೇಗಿ ಜಹೀರ್​ ಖಾನ್​ಗೆ 42ರ ಸಂಭ್ರಮ: ಕ್ರಿಕೆಟ್​ ದಿಗ್ಗಜರಿಂದ ಶುಭ ಹಾರೈಕೆ - ವಿರಾಟ್​ ಕೊಹ್ಲಿ

ಜಹೀರ್​ ಖಾನ್ ಪ್ರಸ್ತುತ ಯುಎಇನಲ್ಲಿದ್ದು, ಮುಂಬೈ ಇಂಡಿಯನ್ಸ್​ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಹೀರ್​ ಖಾನ್​ಗೆ 42 ಸಂಭ್ರಮ
ಜಹೀರ್​ ಖಾನ್​ಗೆ 42 ಸಂಭ್ರಮ

By

Published : Oct 7, 2020, 6:36 PM IST

ಮುಂಬೈ: ಇಂದು 42ನೇ ವಸಂತಕ್ಕೆ ಕಾಲಿಟ್ಟ ಭಾರತ ತಂಡದ ಮಾಜಿ ವೇಗದ ಬೌಲರ್​ ಜಹೀರ್ ಖಾನ್​ ಅವರಿಗೆ ಭಾರತ ಹಾಗೂ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ, ಯುವರಾಜ್ ಸೇರಿದಂತೆ ಹಲವಾರು ಕ್ರಿಕೆಟಿಗರು ಶುಭ ಕೋರಿದ್ದಾರೆ.

ಜಹೀರ್​ ಖಾನ್ ಪ್ರಸ್ತುರ ಯುಎಇನಲ್ಲಿದ್ದು, ಮುಂಬೈ ಇಂಡಿಯನ್ಸ್​ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಟ್ವೀಟ್​

"ಜಹೀರ್​ ಖಾನ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಈ ವರ್ಷ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಬಯಸುತ್ತೇನೆ. ಈ ದಿನವನ್ನು ಆನಂದಿಸಿ" ಎಂದು ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಇನ್ನು ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಎಂದಿನಂತೆ ತಮಾಷೆಯ ಸಂದೇಶದ ಮೂಲಕ ಜಹೀರ್​ಗೆ ಶುಭ ಕೋರಿದ್ದಾರೆ. " ಇನ್ನೊಬ್ಬ ತಾಯಿಯಿಂದ ಸಿಕ್ಕಿರುವ ನನ್ನ ಸಹೋದರ, ಪ್ರತಿದಿನವೂ ಸೋಮಾರಿಯಾಗಿ ಬೆಳೆಯುವವ, ನೆನಪಿರಲಿ ವೃದ್ಧಾಪ್ಯದಲ್ಲೂ ನಾನು ನಿಮ್ಮ ಬೆನ್ನು ಹಿಡಿದುಕೊಂಡಿದ್ದೇನೆ(ಫೋಟೋ ಕುರಿತು) ಹಾಗಾಗಿ ನೀವು ಇನ್ನೊಂದು ವರ್ಷ ಸೋಫಾದ ಮೇಲೆ ಕುಳಿತು ವಿಶ್ರಾಂತಿ ಪಡೆಯಬೇಕು ಎಂದು ನಾನು ಬಯಸುತ್ತೇನೆ. ತುಂಬು ಹೃದಯದಿಂದ ಜನ್ಮದಿನದ ಶುಭಾಶಯಗಳು" ಎಂದು ಬರೆದು ಕೊಂಡಿದ್ದಾರೆ.

ಮೊಹಮ್ಮದ್ ಕೈಫ್

ಇವರಷ್ಟೆ ಅಲ್ಲದೇ ವಿವಿಎಸ್​ ಲಕ್ಷ್ಮಣ್​, ಸೆಹ್ವಾಗ್​, ಗೌತಮ್ ಗಂಭೀರ್, ಸುರೇಶ್ ರೈನಾ, ಆರ್​ ಅಶ್ವಿನ್, ಮೊಹಮ್ಮದ್ ಕೈಫ್​, ಹರ್ಭಜನ್ ಸಿಂಗ್, ರಹಾನೆ , ಇಶಾಂತ್ ಶರ್ಮಾ ಸೇರಿದಂತೆ ಹಲವಾರು ಕ್ರಿಕೆಟಿಗರು ಶುಭ ಕೋರಿದ್ದಾರೆ.

ಐಸಿಸಿ

ಜಹೀರ್​ ಭಾರತ ತಂಡದ ಪರ 92 ಟೆಸ್ಟ್​ ಪಂದ್ಯಗಳಲ್ಲಿ 311 ವಿಕೆಟ್​, 200 ಏಕದಿನ ಪಂದ್ಯಗಳಿಂದ 282 ವಿಕೆಟ್​ ಹಾಗೂ 17 ಟಿ-20 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ.

ಬಿಸಿಸಿಐ ಟ್ವೀಟ್

ABOUT THE AUTHOR

...view details