ಮುಂಬೈ:ಭಾರತ ಕ್ರಿಕೆಟ್ ತಂಡದ ಪವರ್ ಹಿಟ್ಟರ್ ಎಂದೇ ಖ್ಯಾತರಾದ ಸುರೇಶ್ ರೈನಾ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಭಾರತ ತಂಡದ ಪರ ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಮೊದಲಿಗನಾಗಿದ್ದ ರೈನಾಗೆ ಐಸಿಸಿ,ಬಿಸಿಸಿಐ ಹಾಗೂ ಭಾರತ ತಂಡದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಏಕದಿನ ಹಾಗೂ ಟಿ-20 ವಿಶ್ವಕಪ್ನಲ್ಲಿ ಶತಕ ಸಿಡಿಸಿರುವ ಏಕೈಕ ಭಾರತೀಯ ಬ್ಯಾಟ್ಸ್ಮನ್ ಆಗಿರುವ ಸುರೇಶ್ ರೈನಾ ಭಾರತದ ಪರ 18 ಟೆಸ್ಟ್ 226 ಏಕದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನಾಡಿದ್ದಾರೆ.
2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ರೈನಾ 226 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 5 ಶತಕ 36 ಅರ್ಧಶತಕ ಸಹಿತ 5,615 ರನ್ಗಳಿಸಿದ್ದಾರೆ. 78 ಟಿ-20 ಪಂದ್ಯಗಳಿಂದ 1604 ರನ್ಗಳಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ 5 ಅರ್ಧಶತಕ ಸೇರಿದೆ.
ರೈನಾ ಐಪಿಎಲ್ನ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದು 5,368 ರನ್ಗಳಿಸಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡು ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾವುದೇ ಕ್ರಿಕೆಟ್ ವಿಭಾಗದಲ್ಲೂ ರನ್ಗಳಿಸಲೂ ಕಷ್ಟಪಡುತ್ತಿರುವ ರೈನಾ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿ ಟೀಮ್ ಇಂಡಿಯಾಗೆ ಮರಳಲಿ ಎಂಬುವುದು ಅವರ ಅಭಿಮಾನಿಗಳ ಆಶಯವಾಗಿದೆ.