ಕರ್ನಾಟಕ

karnataka

By

Published : Aug 31, 2020, 7:50 PM IST

ETV Bharat / sports

ರಾಷ್ಟ್ರ ನಿಮ್ಮ ಅಪಾರ ಸೇವೆಯನ್ನು ಸದಾ ನೆನಪಿಟ್ಟುಕೊಳ್ಳುತ್ತದೆ: ಪ್ರಣಬ್​ ನಿಧನಕ್ಕೆ ಗಂಭೀರ್, ಕೊಹ್ಲಿ​ ಸಂತಾಪ

ಇವರಲ್ಲದೆ ರೋಹಿತ್​ ಶರ್ಮಾ, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​, ಆರ್​ ಅಶ್ವಿನ್​, ವೃದ್ಧಿಮಾನ್ ಸಹಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಪ್ರಣಬ್​ ಮುಖರ್ಜಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಪ್ರಣಬ್​ ಮುಖರ್ಜಿ
ಪ್ರಣಬ್​ ಮುಖರ್ಜಿ

ನವದೆಹಲಿ:ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾದಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (84) ಸೋಮವಾರ ನಿಧನರಾಗಿದ್ದಾರೆ. ಇವರ ಸಾವಿಗೆ ಸಂತಾಪ ಸೂಚಿಸಿರುವ ಗಂಭೀರ್​, 'ನಿಮ್ಮ ಅಪಾರ ಸೇವೆಯನ್ನು ರಾಷ್ಟ್ರ ಸದಾ ನೆನೆಪಿನಲ್ಲಿಟ್ಟುಕೊಳ್ಳುತ್ತದೆ' ಎಂದಿದ್ದಾರೆ.

ಪ್ರಣಬ್​ ಅವರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ವೈರಸ್ ಪಾಸಿಟಿವ್ ಎಂಬುದು ಬಳಿಕ ತಿಳಿದುಬಂದಿತ್ತು. ಮುಖರ್ಜಿ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಂತರ ಕೆಲವು ದಿನಗಳಿಂದ ಕೋಮಕ್ಕೆ ಜಾರಿದ್ದರು. ಅವರು ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಖಚಿತಪಡಿಸಿದ್ದರು.

ಭಾರತ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದರಾಗಿರುವ ಗೌತಮ್​ ಗಂಭೀರ್​, " ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರು ಪಕ್ಷಾತೀತವಾಗಿ ಗೌರವಿಸಲ್ಪಟ್ಟ ಮತ್ತು ಪ್ರೀತಿಸಿದ ನಾಯಕರ ಗುಂಪಿಗೆ ಸೇರಿದವರು. ದೇವರು ಅವರ ಕುಟುಂಬಕ್ಕೆ ಮತ್ತು ಪ್ರೀತಿಪಾತ್ರರಿಗೆ ದುಃಖವನ್ನು ತಡೆಯುವ ಬಲವನ್ನು ನೀಡಲಿ. ಅವರ ಅಪಾರ ಕೊಡುಗೆಗಳನ್ನು ರಾಷ್ಟ್ರ ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ" ಎಂದು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ, ದೇಶ ಒಬ್ಬ ಒಬ್ಬ ಅದ್ಭುತ ನಾಯಕನನ್ನು ಕಳೆದುಕೊಂಡಿದೆ. ಪ್ರಣಬ್​ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಗುತ್ತಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇವರಲ್ಲದೆ ರೋಹಿತ್​ ಶರ್ಮಾ, ವಿವಿಎಸ್​ ಲಕ್ಷ್ಮಣ್​, ಹರ್ಭಜನ್​ ಸಿಂಗ್​, ಆರ್​ ಅಶ್ವಿನ್​, ವೃದ್ಧಿಮಾನ್ ಸಹಾ, ಮೊಹಮ್ಮದ್ ಕೈಫ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲಾತಾಣದಲ್ಲಿ ಪ್ರಣಬ್​ ಮುಖರ್ಜಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ABOUT THE AUTHOR

...view details