ಕರ್ನಾಟಕ

karnataka

ETV Bharat / sports

ಬಿಗ್​ಬ್ಯಾಶ್​ನಲ್ಲಿ ಯುವಿ.. ಮಾತುಕತೆ ನಡೆಯುತ್ತಿದೆ ಎಂದ ಸಿಕ್ಸರ್​ ಕಿಂಗ್​ ಮ್ಯಾನೇಜರ್​

ಭಾರತದ ಶ್ರೇಷ್ಠ ನಿಗದಿತ ಓವರ್​ನ ಆಟಗಾರ ಯುವರಾಜ್ ಸಿಂಗ್ ಬಿಗ್ ಬ್ಯಾಶ್ ಲೀಗ್​ನಲ್ಲಿ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ..

ಯುವರಾಜ್​ ಸಿಂಗ್​
ಯುವರಾಜ್​ ಸಿಂಗ್​

By

Published : Sep 8, 2020, 5:21 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್, ಆಸ್ಟ್ರೇಲಿಯಾದ ಟಿ20 ಬಿಗ್​ಬ್ಯಾಶ್​ ಲೀಗ್​ನಲ್ಲಿ ಆಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಟಿ20 ಕ್ರಿಕೆಟ್​ನಲ್ಲಿ ಆರು ಬಾಲಿಗೆ ಆರು ಸಿಕ್ಸರ್​ ಸಿಡಿಸಿರುವ ದಾಖಲೆ ಹೊಂದಿರುವ ಯುವರಾಜ್​ ಸಿಂಗ್​ರನ್ನು ಟೂರ್ನಿ ಆಡಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಯತ್ನದಲ್ಲಿದೆ. ಅದಕ್ಕಾಗಿ ಫ್ರಾಂಚೈಸಿಯನ್ನ ಎದುರು ನೋಡುತ್ತಿದೆ ಎಂದು ಯುವಿ ಮ್ಯಾನೇಜರ್​ ಜೇಸನ್​ ವಾರ್ನ್​ ಮಾಧ್ಯಮವೊಂದಕ್ಕೆ ಖಚಿತಪಡಿಸಿದ್ದಾರೆ.

ಈವರೆಗೂ ಯಾವುದೇ ಭಾರತೀಯ ಆಟಗಾರರು ವಿದೇಶಿ ಲೀಗ್​ಗಳಲ್ಲಿ ಆಡಿಲ್ಲ. ವಿದೇಶಿ ಲೀಗ್​ಗಳಲ್ಲಿ ಆಡಬೇಕಾದ್ರೆ ಬಿಸಿಸಿಐನಿಂದ ಎನ್​ಒಸಿ ಪಡೆಯಬೇಕಾಗುತ್ತದೆ. ಒಮ್ಮೆ ಎನ್​ಒಸಿ ಪಡೆದು ವಿದೇಶಿ ಲೀಗ್​ಗಳಲ್ಲಿ ಆಡಿದರೆ ಆತ ಮತ್ತೊಮ್ಮೆ ಬಿಸಿಸಿಐ ಆಯೋಜಿಸುವ ಯಾವುದೇ ಕ್ರಿಕೆಟ್​ನಲ್ಲಿ ಭಾಗವಹಿಸುವಂತಿಲ್ಲ.

ಭಾರತದ ಶ್ರೇಷ್ಠ ನಿಗದಿತ ಓವರ್​ನ ಆಟಗಾರ ಯುವರಾಜ್ ಸಿಂಗ್ಬಿಗ್ ಬ್ಯಾಶ್ ಲೀಗ್​ನಲ್ಲಿ ಆಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಯುವರಾಜ್ ಸಿಂಗ್ ಬಿಸಿಸಿಐಗೆ ರಾಜೀನಾಮೆ ನೀಡಿದ ನಂತರ ಬಿಸಿಸಿಐನಿಂದ ಎನ್​ಒಸಿ ಪಡೆದಿದ್ದಾರೆ. ಕಳೆದ ವರ್ಷ ಅವರು ಕೆನಾಡದ ಗ್ಲೋಬಲ್ ಟಿ20ಯಲ್ಲಿ ಆಡಿದ್ದರು. ನಂತರ ಅಬುಧಾಬಿ ಟಿ10ನಲ್ಲಿ ಮರಾಠ ಅರೇಬಿಯನ್ಸ್​ ತಂಡದ ಪರ ಆಡಿದ್ದರು.

ABOUT THE AUTHOR

...view details