ಕರ್ನಾಟಕ

karnataka

ETV Bharat / sports

ರೆವಿನ್ಯೂ ಪ್ರೊಜೆಕ್ಷನ್​ಗೆ ಒಪ್ಪಿಗೆ ಸೂಚಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ - ಎಸಿಎ ಟಾಪ್​ ಆಟಗಾರರು - ಆಸ್ಟ್ರೇಲಿಯಾ ಟಾಪ್​ ಕ್ರಿಕೆಟಿಗರು

ವಿಶ್ವವ್ಯಾಪಿ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಕ್ರಿಕೆಟ್​ ಸಂಘದೊಂದಿಗೆ ಮಂಡಳಿಯ ಭವಿಷ್ಯದ ಆದಾಯದ ಮೌಲ್ಯ ಮಾಪನವನ್ನು ಮುಂದೂಡುವುದಕ್ಕೆ ಮಾತುಕತೆಯಿಂದ ಸಮ್ಮತಿ ಪಡೆದುಕೊಂಡಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಒಂದು ತಿಂಗಳ ಹಿಂದೆ ಎಸಿಎ, ಸಿಎ ವಿರುದ್ಧ ದಾಖಲಿಸಿದ್ದ ವಿವಾದದ ನೋಟಿಸ್​ ಅನ್ನು ಹಿಂತೆಗೆ ದು ಕೊಂಡಿದೆ.

ರೆವಿನ್ಯೂ ಪ್ರೊಜೆಕ್ಷನ್​ಗೆ ಒಪ್ಪಿಗೆ ಸೂಚಿಸಿದ ಕ್ರಿಕೆಟ್​ ಆಸ್ಟ್ರೇಲಿಯಾ- ಎಸಿಎ
ಕ್ರಿಕೆಟ್​ ಆಸ್ಟ್ರೇಲಿಯಾ

By

Published : Jul 4, 2020, 1:43 PM IST

ಸಿಡ್ನಿ:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಭವಿಷ್ಯದ ಆದಾಯದ ಮೌಲ್ಯಮಾಪನ ಮುಂದೂಡಬೇಕು ಎಂದು ಆಸ್ಟ್ರೇಲಿಯಾದ ಉನ್ನತ ಕ್ರಿಕೆಟಿಗರು, ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಿಶ್ವವ್ಯಾಪಿ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ, ಆಸ್ಟ್ರೇಲಿಯಾ ಕ್ರಿಕೆಟ್​ ಸಂಘದೊಂದಿಗೆ ಮಂಡಳಿಯು ಭವಿಷ್ಯದ ಆದಾಯದ ಮೌಲ್ಯ ಮಾಪನ ಮುಂದೂಡುವುದಕ್ಕೆ ಮಾತುಕತೆಯಿಂದ ಸಮ್ಮತಿ ಪಡೆದುಕೊಂಡಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಒಂದು ತಿಂಗಳ ಹಿಂದೆ ಎಸಿಎ, ಸಿಎ ವಿರುದ್ಧ ದಾಖಲಿಸಿದ್ದ ವಿವಾದದ ನೋಟಿಸ್​ ಹಿಂತೆಗೆದುಕೊಂಡಿದೆ.

ಶನಿವಾರ ಈ ಒಪ್ಪಂದ ನಡೆದಿದ್ದು, ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ಲೆಕ್ಕ ಹಾಕಲು ಮತ್ತು ಮುಂದಿನ ವರ್ಷಕ್ಕೆ ಆದಾಯದ ಹಂಚಿಕೆ ಮುಂದೂಡಲು ಪಕ್ಷಗಳು ಒಪ್ಪಿಕೊಂಡಿವೆ. ಕ್ರೀಡೆಗೆ ಸವಾಲಿನ ಸಂದರ್ಭವಾಗಿರುವ ಇಂತಹ ಸಂದರ್ಭದಲ್ಲಿ ಚರ್ಚೆ ನಡೆಸಲು ಒಪ್ಪಿಕೊಂಡಿದ್ದಕ್ಕೆ ಎಸಿಎಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಸ್ಟ್ರೇಲಿಯಾದ ಪ್ರಮುಖ ಆಟಗಾರರಿಗೆ ವೇತನವನ್ನು ಬೋರ್ಡ್​ ಗಳಿಸುವ ಆದಾಯವನ್ನು ಪರಿಗಣಿಸಿ ಹಂಚಿಕೆ ಮಾಡಲಾಗುತ್ತದೆ. ರೆವಿನ್ಯೂ ಪ್ರೊಜೆಕ್ಷನ್ಸ್​​​ ನಿಂದ ಗುತ್ತಿಗೆ ಪಡೆದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ವೇತನದ ಮೇಲೆ ಪರಿಣಾಮ ಬೀರಬಹುದು. ಅಂದರೆ ಆದಾಯದಲ್ಲಿ ಹೆಚ್ಚಾದರೆ ವೇತನ ಹೆಚ್ಚಾಗುತ್ತದೆ. ಆದಾಯ ಕಡಿಮೆಯಿದ್ದರೆ ಅಂತಹ ಟಾಪ್​ ಆಟಗಾರರ ವೇತನ ಕೂಡ ಕುಸಿಯುತ್ತದೆ.

ಕ್ರಿಕೆಟ್​ ಆಸ್ಟ್ರೇಲಿಯಾದ ಹಾಗೂ ಒಪ್ಪಂದದ ಪ್ರಕಾರ, ಕ್ರಿಕೆಟ್​ ಆಸ್ಟ್ರೇಲಿಯಾವೂ ಏಪ್ರಿಲ್​ ಅಂತ್ಯದ ವೇಳೆಗೆ ಆದಾಯದ ಪ್ರೊಜೆಕ್ಷನ್​ಅನ್ನು ಒದಗಿಸಬೇಕಿತ್ತು. ಆದರೆ ಕೊರೊನಾದಿಂದ ಒಂದು ತಿಂಗಳು ಮುಂದೂಡಲಾಗಿತ್ತು. ಇತ್ತೀಚಿನ ಒಪ್ಪಂದದ ಪ್ರಕಾರ ತವರಿನಲ್ಲಿ ನಡೆಯುವ ಬೇಸಿಗೆ ಕ್ರಿಕೆಟ್​ ಅನ್ನು ಗಣನೆಗೆ ತಗೆದುಕೊಂಡು ಆದಾಯ ಹಂಚಿಕೆ ಸರಿಪಡಿಸಿಕೊಳ್ಳಲಾಗುವುದು ಎನ್ನಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿ ಹಾಗೂ ಬಿಗ್​ಬ್ಯಾಶ್​ ಲೀಗ್​ ಬೇಸಿಗೆಯಲ್ಲಿ ನಡೆಯಲಿದ್ದು, ಈ ವೇಳೆ ತುಂಬಿದ ಸ್ಟೇಡಿಯಂನಲ್ಲಿ ಈ ಟೂರ್ನಿಗಳು ನಡೆದರೆ ಆದಾಯದಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ಇದೆ.

ABOUT THE AUTHOR

...view details