ಮೆಲ್ಬೋರ್ನ್:ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಸ್ಟೀವ್ ಸ್ಮಿತ್ ಅವರನ್ನು ಮತ್ತೆ ನಾಯಕನಾಗಿ ಆಯ್ಕೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್, ಭವಿಷ್ಯಕ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಿತ್ ಒಬ್ಬರೇ ನಮ್ಮ ಆಯ್ಕೆಯಲ್ಲ, ನಮ್ಮಲ್ಲಿ ಆಯ್ಕೆಗಳಿವೆ ಎಂದು ತಿಳಿಸಿದ್ದಾರೆ.
ಸ್ಮಿತ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧದ ಜೊತೆಗೆ ಎಲ್ಲಾ ಮಾದರಿಯ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಸ್ಮಿತ್ ಜೊತೆಗೆ ಟೆಸ್ಟ್ ಸರಣಿಯಲ್ಲಿ ಡೇವಿಡ್ ವಾರ್ನರ್ ಹಾಗೂ ಬೆನ್ಕ್ರಾಪ್ಟ್ ಕೂಡ ನಿಷೇಧದ ಶಿಕ್ಷೆಗೆ ಒಳಗಾಗಿದ್ದರು. ನಂತರ 2019ರ ವಿಶ್ವಕಪ್ ವೇಳೆ ತಂಡಕ್ಕೆ ಮರಳಿದ್ದರು. ಆದರೆ ಸ್ಮಿತ್ ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರ ಮುಂದುವರೆದಿದ್ದರು.
ಸ್ಮಿತ್ ಇದೀಗ ನಾಯಕತ್ವ ವಹಿಸಿಕೊಳ್ಳುವುದಕ್ಕೆ ಅರ್ಹರಾಗಿದ್ದಾರೆ. ಪ್ರಸ್ತುತ ಆಸೀಸ್ ತಂಡ ಭಾರತ ಟೆಸ್ಟ್ ಸರಣಿಯನ್ನಾಡುತ್ತಿದೆ. ಸ್ಮಿತ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಪೇನ್ ಆಸ್ಟ್ರೇಲಿಯಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಇದೀಗ ಕೆಲವು ಮಾಜಿ ಕ್ರಿಕೆಟಿಗರು ಮುಂದೊಮ್ಮೆ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ನಾಯಕರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ: 'ಪೃಥ್ವಿ ಶಾ ಮೇಲೆ ನಂಬಿಕೆಯಿಟ್ಟು ಭಾರತ ಆಡಳಿತ ಮಂಡಳಿ ಮತ್ತೊಂದು ಅವಕಾಶ ನೀಡಲಿ'