ಕರ್ನಾಟಕ

karnataka

By

Published : Oct 7, 2020, 8:18 PM IST

ETV Bharat / sports

ಭಾರತ ವಿರುದ್ಧದ ಸರಣಿಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ

ಟೆಸ್ಟ್​ ಸರಣಿಯನ್ನು ಡಿಸೆಂಬರ್​ 17ರಂದು ಅಡಿಲೇಡ್​ನಲ್ಲಿ ಡೇ ಅಂಡ್​ ನೈಟ್ ಟೆಸ್ಟ್​ ಮೂಲಕ ಪ್ರಾರಂಭಿಸುವ ಸಾಧ್ಯತೆಯಿದೆ. ನಂತರ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯ ಮೆಲ್ಬೋರ್ನ್​ನಲ್ಲಿ ಡಿಸೆಂಬರ್ 26ರಿಂದ 30 ರವರೆಗೆ ಹಾಗೂ 3ನೇ ಟೆಸ್ಟ್​ ಜನವರಿ 7-11 ಹಾಗೂ ಕೊನೆಯ ಟೆಸ್ಟ್​ ಜನವರಿ 15ರಿಂದ 19ರವರೆಗೆ ನಡೆಯಲಿದೆ.

ಭಾರತ vs ಆಸ್ಟ್ರೇಲಿಯಾ
ಭಾರತ vs ಆಸ್ಟ್ರೇಲಿಯಾ

ಮುಂಬೈ: ಭಾರತ ತಂಡದ ವಿರುದ್ಧದ ಸರಣಿಗಾಗಿ ಕ್ರಿಕೆಟ್​ ಆಸ್ಟ್ರೇಲಿಯಾ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮೂಲ ವೇಳಾಪಟ್ಟಿ ಪ್ರಕಾರ ಅಕ್ಟೋಬರ್​ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಕೋವಿಡ್-19 ಹಾಗೂ ಐಪಿಎಲ್ ಕಾರಣ ಆ ಸರಣಿಯನ್ನು ಡಿಸೆಂಬರ್​ 3ಕ್ಕೆ ಮುಂದೂಡಲಾಗಿತ್ತು. ಇದೀಗ ಬಿಸಿಸಿಐ ಒತ್ತಾಯದ ಮೇರೆಗೆ ಕ್ರಿಕೆಟ್ ಆಸ್ಟ್ರೇಲಿಯಾ ನವೆಂಬರ್​ ಕೊನೆಯಲ್ಲಿ ನಡೆಯಬೇಕಿದ್ದ ಸೀಮಿತ ಓವರ್​ಗಳ ಸರಣಿಯ ವೇಳಾಪಟ್ಟಿಯನ್ನು ಬದಲಾಯಿಸಿದೆ ಹಾಗೂ ಟೆಸ್ಟ್​ ಸರಣಿಯನ್ನು ಡಿಸೆಂಬರ್​ 17ರಿಂದ ಪ್ರಾರಂಭಿಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಭಾರತ vs ಆಸ್ಟ್ರೇಲಿಯಾ

ಆಸೀಸ್​ ಕ್ರಿಕೆಟ್​ ಮಂಡಳಿ ಬುಧವಾರ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಟುಗಡೆ ಮಾಡಿದ್ದು, ನವೆಂಬರ್​ 25 ರಿಂದ 30ರವರೆಗೆ ಬ್ರಿಸ್ಬೇನ್​ನಲ್ಲಿ ಏಕದಿನ ಸರಣಿ, ಡಿಸೆಂಬರ್​ 4ರಿಂದ 10ರವರೆಗೆ ಅಡಿಲೇಡ್​ನಲ್ಲಿ ಟಿ-20 ಸರಣಿಯನ್ನು ಆಯೋಜನೆ ಮಾಡುವ ಆಶಯ ಹೊಂದಿದೆ.

ಕ್ರಿಕೆಟ್ ಆಸ್ಟ್ರೇಲಿಯಾ

ಟೆಸ್ಟ್​ ಸರಣಿಯನ್ನು ಡಿಸೆಂಬರ್​ 17ರಂದು ಅಡಿಲೇಡ್​ನಲ್ಲಿ ಡೇ ಅಂಡ್​ ನೈಟ್ ಟೆಸ್ಟ್​ ಮೂಲಕ ಪ್ರಾರಂಭಿಸುವ ಸಾಧ್ಯತೆಯಿದೆ. ನಂತರ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯ ಮೆಲ್ಬೋರ್ನ್​ನಲ್ಲಿ ಡಿಸೆಂಬರ್ 26ರಿಂದ 30 ರವರೆಗೆ ಹಾಗೂ 3ನೇ ಟೆಸ್ಟ್​ ಜನವರಿ 7-11 ಹಾಗೂ ಕೊನೆಯ ಟೆಸ್ಟ್​ ಜನವರಿ 15ರಿಂದ 19ರವರೆಗೆ ನಡೆಯಲಿದೆ.

ಆದರೆ ಈ ವೇಳಾಪಟ್ಟಿ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಬಹುದು ಎನ್ನಲಾಗಿದೆ. ಏಕೆಂದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜನವರಿಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡುತ್ತಿರುವುದರಿಂದ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆಯಾಗಬಹುದು ಎನ್ನಲಾಗುತ್ತಿದೆ.

ABOUT THE AUTHOR

...view details