ಕರ್ನಾಟಕ

karnataka

ETV Bharat / sports

ಡೇ ಅಂಡ್​​​​​ ನೈಟ್​ ಟೆಸ್ಟ್​ನ 2 ದಿನದ ಟಿಕೆಟ್​​​​​ ದುಡ್ಡು ವಾಪಸ್​​​ ನೀಡಲು ಬಿಸಿಎ ನಿರ್ಧಾರ! - ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ಭಾರತದ ಮೊದಲ ಡೇ ಅಂಡ್​ ನೈಟ್ ಟೆಸ್ಟ್​ನ ಕ್ರೀಡಾಂಗಣ ತುಂಬಿ ತುಳುಕಿತ್ತು. ಭಾರತದ ಮೊದಲ ಅಹರ್ನಿಸಿ ಟೆಸ್ಟ್​ ಆದ್ದರಿಂದ ಪಂದ್ಯಕ್ಕೆ ವಾರವಿದ್ದಾಗಲೇ ಟಿಕೆಟ್​ ಮಾರಾಟವಾಗಿದ್ದವು. ಆದರೆ ಭಾರತದ ಬೌಲಿಂಗ್​ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಇನ್ನಿಂಗ್ಸ್​ ಸೋಲು ಕಂಡಿತ್ತು.

Cricket Association of Bengal
Cricket Association of Bengal

By

Published : Nov 26, 2019, 4:49 PM IST

ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಡೇ ಅಂಡ್​ ನೈಟ್​ ಟೆಸ್ಟ್​ ಕೇವಲ 3 ದಿನದಲ್ಲೇ ಮುಗಿದಿದ್ದರಿಂದ ಕೊನೆಯ ಎರಡು ದಿನಗಳ ಟಿಕೆಟ್​ ಹಣ ವಾಪಸ್​ ನೀಡಲು ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ ನಿರ್ಧರಿಸಿದೆ.

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ಭಾರತದ ಮೊದಲ ಡೇ ಅಂಡ್​ ನೈಟ್ ಟೆಸ್ಟ್​ನ ಕ್ರೀಡಾಂಗಣ ತುಂಬಿ ತುಳುಕಿತ್ತು. ಭಾರತದ ಮೊದಲ ಅಹರ್ನಿಸಿ ಟೆಸ್ಟ್​ ಆದ್ದರಿಂದ ಪಂದ್ಯಕ್ಕೆ ವಾರವಿದ್ದಾಗಲೇ ಟಿಕೆಟ್​ ಮಾರಾಟವಾಗಿದ್ದವು. ಆದರೆ ಭಾರತದ ಬೌಲಿಂಗ್​ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಇನ್ನಿಂಗ್ಸ್​ ಸೋಲು ಕಂಡಿತ್ತು.

ಕೊನೆ 2 ದಿನದ ಟಿಕೆಟ್​ ಖರೀದಿಸಿದ್ದ ಪ್ರೇಕ್ಷಕರಿಗೆ ಬೆಂಗಾಲ್​ ಕ್ರಿಕೆಟ್ ಅಸೋಸಿಯೇಷನ್ ಹಣವನ್ನು ವಾಪಸ್ ನೀಡಲು ನಿರ್ಧರಿಸಿದೆ. ಈ ಹಿಂದೆ ಕ್ರಿಕೆಟ್​ ಸಂಸ್ಥೆಗಳು ಮಳೆಯಿಂದ ಪಂದ್ಯ ರದ್ದಾದರೆ ಹಣ ವಾಪಸ್ ನೀಡುತ್ತಿದ್ದವು. ಆದ್ರೆ ಪಂದ್ಯ ಅವಧಿಗಿಂತ ಮೊದಲೇ ಮುಗಿದ ಹಿನ್ನೆಲೆ ಟಿಕೆಟ್ ಹಣ ಮರಳಿ ನೀಡಿರುವುದು ವಿರಳ. ಆದರೆ ಬಿಸಿಎ ಕೊನೆಯ 2 ದಿನದ ಹಣ ವಾಪಸ್ ನೀಡುತ್ತಿರುವುದು ಕ್ರಿಕೆಟ್​ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಆನ್​ಲೈನ್​ನಲ್ಲಿ ಬುಕ್​ ಮಾಡಿದವರಿಗೆ ಸಂದೇಶದ ಮೂಲಕ ಟಿಕೆಟ್​ ಮರುಪಾವತಿ ಬಗ್ಗೆ ತಿಳಿಸಲಾಗುವುದು. ಹಾಗೂ ಆಫ್​ಲೈನ್​ನಲ್ಲಿ ಟಿಕೆಟ್​ ಕೊಂಡವರಿಗೆ ಅಸೋಸಿಯೇಷನ್​ ಶೀಘ್ರದಲ್ಲೇ ಮಾಹಿತಿ ನೀಡಲಿದೆ.

ABOUT THE AUTHOR

...view details