ಟ್ರಿನಿಡಾಡ್: ಕೋವಿಡ್ 19 ಪರಿಣಾಮ ದೀರ್ಘ ಸಮಯದಿಂದ ಸ್ತಗಿತಗೊಂಡಿದ್ದ ಕ್ರಿಕೆಟ್ ಈಗಾಗಲೆ ಇಂಗ್ಲೆಂಡ್ನಲ್ಲಿ ಶುರುವಾಗಿದೆ. ಆದರೆ ಟ್ರಿನಿಡಾಡ್ನಲ್ಲಿ ಕೆರಿಬಿಯನ್ ಲೀಗ್ ಮೂಲಕ ಟಿ20 ಕ್ರಿಕೆಟ್ ಕೂಡ ಆರಂಭವಾಗಲಿದೆ .
2020ರ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದ್ದು, ಟ್ರಿಂಬಾಂಗೊ ನೈಟ್ ರೈಡರ್ಸ್ ಮತ್ತು ಗಯಾನ ಅಮೇಜಾನ್ ವಾರಿಯರ್ಸ್ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ. ಟ್ರೆನಿಡಾಡ್‌ನ ಎರಡು ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳ ಆಟಗಾರರು ಬಯೋ ಸೆಕ್ಯೂರ್ ವಾತಾವರಣದಲ್ಲಿ ಇರಬೇಕಾಗಿದೆ.