ತರೌಬ(ಟ್ರಿನಿಡಾಡ್): ಜಮೈಕಾ ತಲವಾಸ್ ಹಾಗೂ ಗಯಾನ ಅಮೇಜಾನ್ ವಾರಿಯರ್ಸ್ ತಂಡಗಳು 2ನೇ ದಿನ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಯ ಸಾಧಿಸಿವೆ.
ಟೂರ್ನಮೆಂಟ್ನ ಎರಡನೇ ದಿನ ಜಮೈಕಾ ತಲವಾಸ್, ಸೇಂಟ್ ಲೂಸಿಯಾ ಜೌಕ್ಸ್ ತಂಡವನ್ನು 5 ವಿಕೆಟ್ಗಳಿಂದ ಹಾಗೂ ಗಯಾನ ಅಮೇಜಾನ್ ವಾರಿಯರ್ಸ್ ಸೇಂಟ್ ಕಿಟ್ಸ್ ನೇವಿಸ್ ಪೇಟ್ರಿಯೋಟ್ಸ್ ತಂಡವನ್ನು 3 ವಿಕೆಟ್ಗಳಿಂದ ಮಣಿಸಿದೆ.
ಮೊದಲ ಪಂದ್ಯದಲ್ಲಿ ಡರೆನ್ ಸಾಮಿ ನೇತೃತ್ವದ ಲೂಸಿಯಾ ಜೌಕ್ಸ್ ಆಲ್ರೌಂಡರ್ ರಾಸ್ಟನ್ ಚೇಸ್(52) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ158 ರನ್ ಗಳಿಸಿತ್ತು.
ಮುಜೀಬ್ ಉರ್ ರಹಮಾನ್ ಹಾಗೂ ವೀರಸಾಮಿ ಪೆರುಮಾಳ್ ತಲಾ 2 ವಿಕೆಟ್ ಪಡೆದಿದ್ದರು.
158 ರನ್ಗಳ ಗುರಿ ಪಡೆದ ಜಮೈಕಾ ಇನ್ನೂ 7 ಎಸೆತಗಳಿರುವಂತೆ ಗೆಲುವು ತನ್ನದಾಗಿಸಿತು. ಆಸಿಫ್ ಅಲಿ 27 ಎಸೆತಗಳಲ್ಲಿ 2 ಸಿಕ್ಸರ್ಸ್ ಹಾಗೂ 4 ಬೌಂಡರಿಗಳ ಸಹಿತ 47 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಎರಡನೇ ಪಂದ್ಯದಲ್ಲಿ ಗಯಾನ, ಪೇಟ್ರಿಯೋಟ್ಸ್ ತಂಡವನ್ನು ಕೇವಲ 127 ರನ್ಗಳಿಗೆ ನಿಯಂತ್ರಿಸಿತು. 30 ರನ್ ಗಳಿಸಿದ ಲೆವಿಸ್ ಟಾಪ್ ಸ್ಕೋರರ್ ಎನಿಸಿಕೊಂಡರು. ಗಯಾನ ಪರ ಕೀಮೋ ಪಾಲ್ 19 ರನ್ ನೀಡಿ 4 ವಿಕೆಟ್ ಪಡೆದರು.
128 ರನ್ಗಳ ಗುರಿ ಪಡೆದ ಗಯಾನ ಶಿಮ್ರಾನ್ ಹೆಟ್ಮೈರ್ ಅವರ ಅರ್ಧಶತಕದ ನೆರವಿನಿಂದ 18 ಎಸೆತಗಳಿರುವಂತೆ ಗೆಲುವು ಸಾಧಿಸಿತು. 44 ಎಸೆತಗಳನ್ನೆದುರಿಸಿದ ಹೆಟ್ಮೈರ್ 3 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 71 ರನ್ ಗಳಿಸಿದರು.
ರಯಾದ್ ಎಮ್ರಿಟ್ 3 ವಿಕೆಟ್ ಪಡೆದರೂ ಗಯಾನ ಸೋಲು ತಪ್ಪಿಸಲಾಗಲಿಲ್ಲ. 19 ರನ್ ನೀಡಿ 4 ವಿಕೆಟ್ ಪಡೆದ ಗಯಾನ ತಂಡದ ಕೀಮೋ ಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.