ಜಮೈಕಾ:ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನೇತೃತ್ವದ ಟ್ರೆಂಬ್ಯಾಗೋ ನೈಟ್ ರೈಡರ್ಸ್ 2019ರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ 267 ರನ್ ದಾಖಲಿಸಿ ಟಿ-20 ಇತಿಹಾಸದಲ್ಲಿ 3ನೇ ಗರಿಷ್ಠ ದಾಖಲೆ ನಿರ್ಮಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಟಿಕೆಆರ್ ತಂಡ ಜಮೈಕಾ ತಲೈವಾಸ್ ವಿರುದ್ಧ 267 ರನ್ ಗಳಿಸುವ ಮೂಲಕ ಸಿಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟಿಕೆಆರ್ ತಂಡಕ್ಕೆ ಲೆಂಡ್ಲ್ ಸಿಮ್ಮನ್ಸ್ 42 ಎಸೆತಗಳಲ್ಲಿ 86, ಕಾಲಿನ್ ಮನ್ರೊ 50 ಎಸೆತಗಳಲ್ಲಿ 96, ಕೀರನ್ ಪೊಲಾರ್ಡ್ 17 ಎಸೆತಗಳಲ್ಲಿ 45 ರನ್ ಗಳಿಸಿ ಈ ದಾಖಲೆಗೆ ನೆರವಾದರು.