ಕರ್ನಾಟಕ

karnataka

ETV Bharat / sports

ಗೇಲ್ ಸುನಾಮಿ, ಲೆವಿಸ್ ಬಿರುಗಾಳಿ ಬ್ಯಾಟಿಂಗ್...! CPLನಲ್ಲಿ ಹೊಸ ದಾಖಲೆ ನಿರ್ಮಾಣ

ಮೊದಲು ಬ್ಯಾಟ್ ಮಾಡಿದ ಜಮೈಕಾ ತಲ್ಲವಾಸ್ ನೀಡಿದ 242 ರನ್​ಗಳ ಅಸಾಧ್ಯ ಗುರಿಯನ್ನು ಇನ್ನೂ ಏಳು ಎಸೆತ ಬಾಕಿ ಇರುವಂತೆ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೇಟ್ರಿಯಟ್ಸ್ ತಂಡ ತಲುಪುವ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್​ ದಾಖಲೆಯ ಚೇಸಿಂಗ್​ಗೆ ಸಾಕ್ಷಿಯಾಗಿದೆ.

ದಾಖಲೆಯ ಚೇಸಿಂಗ್

By

Published : Sep 11, 2019, 12:12 PM IST

ಸೇಂಟ್ ಕಿಟ್ಸ್: ಬೌಂಡರಿ, ಸಿಕ್ಸರ್​ಗಳ ಸುರಿಮಳೆ... ಮೊದಲ ಬ್ಯಾಟಿಂಗ್​ನಲ್ಲಿ ಗೇಲ್​​ ಬಿರುಗಾಳಿ.. ಎರಡನೇ ಬ್ಯಾಟಿಂಗ್​ನಲ್ಲಿ ಎವಿನ್ ಲೆವಿಸ್ ಸುನಾಮಿ.. ಇದು ಮಂಗಳವಾರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್​​ನ ಒಟ್ಟಾರೆ ಚಿತ್ರಣ...!

ಮೊದಲು ಬ್ಯಾಟ್ ಮಾಡಿದ ಜಮೈಕಾ ತಲ್ಲವಾಸ್ ನೀಡಿದ 242 ರನ್​ಗಳ ಅಸಾಧ್ಯ ಗುರಿಯನ್ನು ಇನ್ನೂ ಏಳು ಎಸೆತ ಬಾಕಿ ಇರುವಂತೆ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೇಟ್ರಿಯಟ್ಸ್ ತಂಡ ತಲುಪುವ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್​ ದಾಖಲೆಯ ಚೇಸಿಂಗ್​ಗೆ ಸಾಕ್ಷಿಯಾಗಿದೆ.

242 ರನ್​ಗಳ ಗುರಿಯನ್ನು ಬೆನ್ನತ್ತಿದ ಸೇಂಟ್ ಕಿಟ್ಸ್ ತಂಡದ ಆರಂಭಿಕ ನಾಲ್ವರು ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಡೆವಾನ್ ಥೋಮಸ್ 71(40 ಎಸೆತ), ಎವಿನ್ ಲೆವಿಸ್ 53(18 ಎಸೆತ), ಲೌರಿ ಎವಾನ್ಸ್ 41(20 ಎಸೆತ) ಹಾಗೂ ಫ್ಯಾಬಿಯನ್ ಅಲೆನ್ 37(15 ಎಸೆತ) ಮೂಲಕ ತಂಡ ಅಸಾಧ್ಯವನ್ನು ಸಾಧ್ಯವಾಗಿಸಿತು.

18.5 ಎಸೆತದಲ್ಲಿ ಸೇಂಟ್ ಕಿಟ್ಸ್ ಆರು ವಿಕೆಟ್ ನಷ್ಟಕ್ಕೆ 242 ರನ್​ಗಳ ಗುರಿಯನ್ನು ಮುಟ್ಟಿ ನೂತನ ದಾಖಲೆ ನಿರ್ಮಿಸಿತು.

ಜಮೈಕಾ ತಲ್ಲವಾಸ್ ಪರ ಓಶಾನೆ ಥೋಮಸ್ 53 ರನ್ ನೀಡಿ 4 ವಿಕೆಟ್ ಕಿತ್ತರು.

ಗೇಲ್ ಅಬ್ಬರ, ಭರ್ಜರಿ ಟಾರ್ಗೆಟ್:

ಮೊದಲು ಬ್ಯಾಟ್ ಮಾಡಿದ ಜಮೈಕಾ ತಲ್ಲವಾಸ್ ನಿಗದಿತ 20 ಓವರ್​ನಲ್ಲಿ ಅಕ್ಷರಶಃ ಅಬ್ಬರಿಸಿದರು. ಆರಂಭಿಕ ಆಟಗಾರ ಕ್ರಿಸ್ ಗೇಲ್ 62 ಎಸೆತದಲ್ಲಿ 10 ಸಿಕ್ಸರ್ ಹಾಗೂ 7 ಬೌಂಡರಿ ಮೂಲಕ ಆಕರ್ಷಕ 116 ರನ್ ಸಿಡಿಸಿ ತಂಡಕ್ಕೆ ಆದ್ಭುತ ಓಪನಿಂಗ್ ನೀಡಿದರು.

ಚಾಡ್​ವಿಕ್​ ವಾಲ್ಟನ್​​ 36 ಎಸೆತದಲ್ಲಿ 8 ಸಿಕ್ಸರ್ ಹಾಗೂ 3 ಬೌಂಡರಿ ಮೂಲಕ ವೇಗದ ವೇಗದ 73 ರನ್ ಸಿಡಿಸಿದರು. ಆದರೆ ಉಳಿದ ಆಟಗಾರರಿಂದ ಅಷ್ಟೇನೂ ಕೊಡುಗೆ ಬರಲಿಲ್ಲ. ಆದರೆ ತಂಡದ ಮೊತ್ತಕ್ಕೆ ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ. 20 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 241 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು.

ಸೇಂಟ್ ಕಿಟ್ಸ್ ಪರ ಫ್ಯಾಬಿಯನ್ ಅಲೆನ್ ಹಾಗೂ ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಹಂಚಿಕೊಂಡರು.

ABOUT THE AUTHOR

...view details