ಮೆಲ್ಬರ್ನ್:ಮಹಾಮಾರಿ ಕೊರೊನಾ ಭೀತಿ ವಿಶ್ವವ್ಯಾಪಿ ಹಬ್ಬಿದ್ದು, ಅದರಿಂದ ಹೊರಬರಲು ಎಲ್ಲ ದೇಶಗಳು ಹರಸಾಹಸ ಪಡುತ್ತಿವೆ. ಇದರ ಭೀತಿ ಈಗಾಗಲೇ ಕ್ರೀಡಾ ವಲಯದ ಮೇಲೂ ಬಿದ್ದಿದೆ.
ನಿಲ್ಲದ ಮಹಾಮಾರಿ ಭೀತಿ... ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವಿನ ಕ್ರಿಕೆಟ್ ಸರಣಿ ಕೂಡ ರದ್ದು! - ಡೆಡ್ಲಿ ಕೊರೊನಾ ವೈರಸ್
ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಇದೀಗ ಕ್ರೀಡಾ ಲೋಕದ ಮೇಲೂ ತನ್ನ ಕರಿನೆರಳು ಬೀರಿದ್ದು, ಅದೇ ಕಾರಣಕ್ಕಾಗಿ ಎಲ್ಲ ದೇಶಗಳು ಆಯೋಜನೆ ಮಾಡಿರುವ ಕ್ರಿಕೆಟ್ ಸರಣಿ ರದ್ಧು ಮಾಡಿ ಆದೇಶ ಹೊರಹಾಕುತ್ತಿವೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ಕಾರಣಕ್ಕಾಗಿ ಮುಂದೂಡಿಕೆಯಾಗಿದ್ದು, ಏಪ್ರಿಲ್ 15ರ ಬಳಿಕ ನಡೆಸಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ದಕ್ಷಿಣ ಆಪ್ರಿಕಾ-ಭಾರತದ ನಡುವಿನ ಏಕದಿನ ಸರಣಿ ಕೂಡ ಮುಂದೂಡಿಕೆ ಮಾಡಿ ಬಿಸಿಸಿಐ ಆದೇಶ ಹೊರಹಾಕಿದೆ.
ಇದೀಗ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಏಕದಿನ ಸರಣಿ ರದ್ಧುಗೊಂಡಿದೆ. ಈಗಾಗಲೇ ನಿನ್ನೆ ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆದಿದ್ದು, ಆಸ್ಟ್ರೇಲಿಯಾ ಗೆಲುವು ದಾಖಲು ಮಾಡಿತ್ತು. ಆದರೆ ಉಳಿದ ಎರಡು ಪಂದ್ಯಗಳನ್ನ ಕೊರೊನಾ ಭೀತಿಯಿಂದಲೇ ರದ್ಧು ಮಾಡಲಾಗಿದ್ದು, ಹೊಸ ದಿನಾಂಕ ಬರುವ ದಿನಗಳಲ್ಲಿ ನಿಗದಿ ಮಾಡುವುದಾಗಿ ತಿಳಿದು ಬಂದಿದೆ. ಕೊರೊನಾ ಮಹಾಮಾರಿ ಎಲ್ಲ ದೇಶಗಳಲ್ಲೂ ಹಬ್ಬುತ್ತಿದ್ದಂತೆ ಅದರ ವಿರುದ್ಧ ಹೋರಾಡಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಮಾರ್ಚ್ 19ರಿಂದ ಇಂಗ್ಲೆಂಡ್ - ಶ್ರೀಲಂಕಾ ನಡುವೆ ಆರಂಭಗೊಳ್ಳಬೇಕಾಗಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಂದೂಡಿಕೆಯಾಗಿದೆ. ದಿಗ್ಗಜರ ಕ್ರಿಕೆಟ್ ಟೂರ್ನಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಕೂಡ ನಡೆಯುತ್ತಿಲ್ಲ.