ಕರ್ನಾಟಕ

karnataka

ETV Bharat / sports

ಯುಎಇ ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ; ಪಂದ್ಯ ಮುಂದೂಡಿಕೆ - ಯುಎಇ ತಂಡದ ಕ್ರಿಕೆಟಿಗನಿಗೆ ಕೊರೊನಾ ಸೊಂಕು

ಯುಎಇ ತಂಡದ ಇಬ್ಬರು ಕ್ರಿಕೆಟಿಗರ ನಂತರ ಮತ್ತೊಬ್ಬ ಆಟಗಾರನಿಗೆ ಕೊರೊನಾ ವೈರಸ್ ತಗುಲಿರುವುದು ಕನ್ಫರ್ಮ್​ ಆಗಿದ್ದು, ಐರ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ.

2nd ODI between UAE and Ireland postponed
ಯುಎಇ ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ ಸೋಂಕು

By

Published : Jan 10, 2021, 8:01 AM IST

ಅಬುಧಾಬಿ (ಯುಎಇ): ಶನಿವಾರ ಯುಎಇ ತಂಡದ ಆಟಗಾರ ಅಲಿಶನ್ ಶರಾಫು ಅವರಿಗೆ ಕೊರೊನಾ ಸೋಂಕು ಪತ್ತೆಯಾದ ನಂತರ ಯುಎಇ ಮತ್ತು ಐರ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ. ಚಿರಾಗ್​ ಸೂರಿ ಹಾಗೂ ಆರ್ಯನ್​ ಲಾಕ್ರಾ ಅವರ ನಂತರ ಯುಎಇ ತಂಡದ ಮೂರನೇ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಡಿಸೆಂಬರ್ 29 ರಂದು ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆಗ ಎಲ್ಲರ ವರದಿಗಳು ನೆಗೆಟಿವ್ ಬಂದಿದ್ದವು. ನಂತರ ಆಟಗಾರರನ್ನು ಪ್ರತ್ಯೇಕ ಕೋಣೆಗಳಲ್ಲಿ ಮೂರು ದಿನಗಳವರೆಗೆ ಐಸೊಲೇಟ್ ಮಾಡಲಾಗಿತ್ತು.

ಇದರ ನಂತರ ಚಿರಾಗ್ ಜ.7 ರಂದು ಮತ್ತು ಆರ್ಯನ್ ಲಕ್ರಾ ಜ.8 ರಂದು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ. ನಂತರ ಇಬ್ಬರನ್ನೂ ಕೋಣೆಗಳಲ್ಲಿ ಐಸೊಲೇಟ್ ಮಾಡಲಾಗಿದೆ.

ಇನ್ನು 7ನೇ ಬಾರಿ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಶರಾಫು ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಹೀಗಾಗಿ ಇಂದು ನಿಗದಿಯಾಗಿದ್ದ ಪಂದ್ಯವನ್ನು ಜನವರಿ 16 ರವರೆಗೆ ಮುಂದೂಡಲು ಉಭಯ ತಂಡಗಳು ಸಮ್ಮತಿಸಿವೆ. ಮೊದಲ ಏಕದಿನ ಪಂದ್ಯದಲ್ಲಿ ಯುಎಇ ತಂಡ ಐರ್ಲೆಂಡ್‌ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತ್ತು.

ABOUT THE AUTHOR

...view details