ಕೋಲ್ಕತ್ತಾ:ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮ್ಮಿ ವಿರುದ್ಧ ಪಶ್ಚಿಮ ಬಂಗಾಳ ಅಲ್ಲಿಪುರ್ ಕೋರ್ಟ್ನಿಂದ ಜಾರಿಯಾಗಿದ್ದ ಅರೆಸ್ಟ್ ವಾರೆಂಟ್ಗೆ ಇದೀಗ ತಡೆ ನೀಡಿ ಸೆಷನ್ ಕೋರ್ಟ್ ಆದೇಶ ಹೊರಡಿಸಿದ್ದು, ಇದರಿಂದ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಹಸೀನ್ ಜಹಾನ್ ಪತಿ ಮೊಹಮ್ಮದ್ ಶಮಿ ಹಾಗೂ ಆತನ ಸಹೋದರನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ರು. ಜಹಾನ್ ದೂರಿನ ಆಧಾರದ ಮೇಲೆ ಶಮಿ ಹಾಗೂ ಅವರ ಕುಟುಂಬದ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಜತೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಕೋರ್ಟ್, ಮೊಹಮ್ಮದ್ ಶಮಿ ಸೆರೆಂಡರ್ ಆಗಲು ಅಥವಾ ಜಾಮೀನು ಪಡೆಯಲು 15 ದಿನಗಳ ಕಾಲಾವಕಾಶ ನೀಡಿತ್ತು.