ನವದೆಹಲಿ: ಬರೋಬ್ಬರಿ 4 ಕೋಟಿರೂ ಮೊತ್ತಕ್ಕೆ ಆರ್ಸಿಬಿ ಸೇರಿದ್ದ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಈ ಬಾರಿ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿರುವುದಕ್ಕೆ ಕಾರಣ ಬಹಿರಂಗ ಪಡಿಸಿದ್ದಾರೆ.
2019ರ ಹರಾಜಿನಲ್ಲಿ ಕೇನ್ ರಿಚರ್ಡ್ಸರನ್ರನ್ನು ಆರ್ಸಿಬಿ 4 ಕೋಟಿ ರೂ ನೀಡಿ ಖರೀದಿಸಿತ್ತು. ಬೌಲರ್ಗಳ ಕೊರೆತೆಯನ್ನು ಎದುರಿಸುತ್ತಿದ್ದ ಆರ್ಸಿಬಿ ಆ ವಿಭಾಗವನ್ನು ಬಲಿಷ್ಟಗೊಳಿಸಲು ರಿಚರ್ಡ್ಸನ್ರನ್ನು ಖರೀದಿಸಿತ್ತು. ಆದರೆ ಅವರು ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಅವರ ನಿರ್ಧಾರದ ಬಳಿಕ ಆರ್ಸಿಬಿ ಆಸ್ಟ್ರೆಲಿಯಾದ ಸ್ಪಿನ್ನರ್ ಆ್ಯಡಂ ಜಂಪಾರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆದರೆ ಐಪಿಎಲ್‌ನಿಂದ ಹಿಂದೆ ಸರಿಯುವುದು ಕಠಿಣ ನಿರ್ಧಾರ ಎಂದು ತಿಳಿದಿದ್ದರೂ, ಪ್ರಸ್ತುತ ನಿರ್ಧಾರದಲ್ಲಿ ಅದು ಉತ್ತಮವಾದ್ದು ಎಂದು ಭಾವಿಸುತ್ತೇನೆ ಎಂದಿದ್ದಾರೆ.