ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಮೇಲಿನ ಭಯೋತ್ಪಾದಕ ದಾಳಿಗಿಂತಲೂ ಪಿಸಿಬಿಗೆ ಕೆಟ್ಟ ಹೆಸರು ತಂದಿದ್ದು ಮ್ಯಾಚ್​ ಫಿಕ್ಸಿಂಗ್ - ಪಾಕ್​ ಸರ್ಕಾರ

ಇತ್ತೀಚೆಗೆ ಪಿಸಿಬಿ ಕ್ರಿಕೆಟ್​ನಲ್ಲಿ ಮ್ಯಾಚ್ ಫಿಕ್ಸಿಂಗ್​ ಚಟುವಟಿಕೆಯನ್ನು ಅಪರಾಧ ಕಾಯಿದೆ ಅಡಿ ಸೇರಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ದಂಡಿಸಬೇಕು' ಎಂದು ಪಾಕ್​ ಸರ್ಕಾರವನ್ನು ಕೇಳಿಕೊಂಡಿತ್ತು.

ಜಹೀರ್ ಅಬ್ಬಾಸ್​
ಜಹೀರ್ ಅಬ್ಬಾಸ್​

By

Published : Apr 22, 2020, 2:01 PM IST

ಕರಾಚಿ:2009ರಲ್ಲಿ ಶ್ರೀಲಂಕಾದ ಮೇಲೆ ನಡೆದ ಭಯೋತ್ಪಾದಕ ದಾಳಿಗಿಂತಲೂ ಫಿಕ್ಸಿಂಗ್​ ಭ್ರಷ್ಟಾಚಾರದಿಂದ ಪಾಕಿಸ್ತಾನ ಕ್ರಿಕೆಟ್​ ಅಧೋಗತಿಗಿಳಿದಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಹೀರ್ ಅಬ್ಬಾಸ್​ ಹೇಳಿದ್ದಾರೆ.

ಜಂಟಲ್​ ಮ್ಯಾನ್ ಗೇಮ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ ಆಟದಲ್ಲಿ ಕೆಲವು ಸ್ವಾರ್ಥ ಕ್ರಿಕೆಟಿಗರು ಆಸೆ ಆಮಿಷಕ್ಕೆ ಬಲಿಯಾಗಿ ಕ್ರಿಕೆಟ್​ ಆಟವನ್ನು ಭ್ರಷ್ಟಾಚಾರದ ಕಡೆ ಕೊಂಡೊಯ್ಯುತ್ತಿದ್ದಾರೆ. ಜಾಗತಿಕ ಕ್ರಿಕೆಟ್​ನಲ್ಲಿ ಫಿಕ್ಸಿಂಗ್​ನಲ್ಲಿ ಬೇರೆ ರಾಷ್ಟ್ರಗಳಿಗಿಂತ ಪಾಕಿಸ್ತಾನದ ಕ್ರಿಕೆಟಿಗರ ಹೆಸರೇ ಹೆಚ್ಚು ಕೇಳಿಬರುತ್ತಿದೆ. ಈ ಕಾರಣದಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಪಿಸಿಬಿಯ ಹಿನ್ನಡೆಗೆ ಫಿಕ್ಸಿಂಗ್​ ಭೂತವೇ ಕಾರಣ ಎಂದಿದ್ದಾರೆ.

ಇತ್ತೀಚೆಗೆ ಪಿಸಿಬಿ ಕ್ರಿಕೆಟ್​ನಲ್ಲಿ ಮ್ಯಾಚ್ ಫಿಕ್ಸಿಂಗ್​ ಚಟುವಟಿಕೆಯನ್ನು ಅಪರಾಧ ಕಾಯಿದೆ ಅಡಿ ಸೇರಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ದಂಡಿಸಬೇಕು' ಎಂದು ಪಾಕ್​ ಸರ್ಕಾರವನ್ನು ಕೇಳಿಕೊಂಡಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಜಹೀರ್​ ಅಬ್ಬಾಸ್, 2009ರಲ್ಲಿ ಲಾಹೋರ್​ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಗಿಂತಲೂ ಪಿಸಿಬಿಗೆ ಆಟಗಾರರು ಫಿಕ್ಸಿಂಗ್​ನಲ್ಲಿ ಭಾಗಿಯಾಗಿರವುದೇ ಹೆಚ್ಚು ಕೆಟ್ಟ ಹೆಸರು ತಂದಿದೆ. ಹಾಗಾಗಿ ಪಾಕ್​ ಸರ್ಕಾರ ಆದಷ್ಟು ತುರ್ತಾಗಿ ಫಿಕ್ಸಿಂಗ್​ ಅನ್ನು ಅಪರಾದ ಕಾಯ್ದಿಗೆ ಸೇರಿಸಬೇಕು, ಅದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಮೊಹಮ್ಮದ್ ಆಸಿಫ್​, ಮೊಹಮ್ಮದ್​ ಅಮೀರ್​, ಸರ್ಜೀಲ್​ ಖಾನ್​, ಡಾನೀಸ್ ಕನೇರಿಯಾ, ಸಲ್ಮಾನ್​ ಭಟ್​, ಸಲೀಮ್​ ಮಲಿಕ್​, ಆಟ ಉರ್​ ರೆಹ್ಮಾನ್​ ಮ್ಯಾಚ್​ ಫಿಕ್ಸಿಂಗ್​ನಲ್ಲಿ ಪಾಲ್ಗೊಂಡು ನಿಷೇಧಕ್ಕೊಳಗಾಗಿದ್ದರು.

ABOUT THE AUTHOR

...view details