ಮೆಲ್ಬೋರ್ನ್: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ವಿಶ್ವದೆಲ್ಲೆಡೆ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಭಾರತದಲ್ಲಿ 73 ಮಂದಿಗೆ ಈ ವೈರಸ್ ತಗುಲಿದ್ದು, ಚೀನಾದಲ್ಲೇ ಬರೋಬ್ಬರಿ 3500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಮಹಿಳಾ ಟಿ-20 ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಓರ್ವನಲ್ಲಿ ಕೊರೊನಾ! - ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ
ಚೀನಾದಲ್ಲಿ ಹರಡಿರುವ ಮಾರಣಾಂತಿಕ ಕೊರೊನಾ ವೈರಸ್ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದ್ದು, ಕಳೆದ ಭಾನುವಾರ ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಟಿ-20 ಫೈನಲ್ ಪಂದ್ಯದಲ್ಲೂ ಓರ್ವ ವ್ಯಕ್ತಿಗೆ ಕೊರೊನಾ ಇತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಇದೀಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ಮಾರ್ಚ್ 8ರಂದು ಭಾರತ-ಆಸ್ಟ್ರೇಲಿಯಾ ನಡುವೆ ನಡೆದಿದ್ದ ವಿಶ್ವಕಪ್ ಟಿ-20 ಫೈನಲ್ ಪಂದ್ಯ ನೋಡಲು ಆಗಮಿಸಿದ್ದ ಓರ್ವ ವ್ಯಕ್ತಿಗೆ ಕೊರೊನಾ ಇರುವುದು ಕನ್ಫರ್ಮ್ ಆಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಪಂದ್ಯ ವೀಕ್ಷಣೆ ಮಾಡಲು ದಾಖಲೆಯ 85000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು.
ಇದೀಗ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮ್ಯಾನೇಜ್‌ಮೆಂಟ್ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಹಾಕಿದೆ. ವಿಶ್ವಕಪ್ ಫೈನಲ್ ವೀಕ್ಷಿಸಿದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತಪಡಿಸಿದೆ. ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯು (ಡಿಎಚ್‌ಹೆಚ್‌ಎಸ್) ಇದನ್ನು ದೃಢಪಡಿಸಿದೆ. ಕ್ರಿಕೆಟ್ ಮೈದಾನದಲ್ಲಿ ಉತ್ತರ ಸ್ಟ್ಯಾಂಡ್‌ನಲ್ಲಿ N42 ಸೀಟ್ನಲ್ಲಿ ಸೋಂಕಿತ ವ್ಯಕ್ತಿ ಕುಳಿತುಕೊಂಡಿದ್ದರು ಎಂಬ ಮಾಹಿತಿ ನೀಡಲಾಗಿದ್ದು, ಪಕ್ಕದಲ್ಲಿ ಕುಳಿತುಕೊಂಡವರಿಗೆ ಸೋಂಕು ತಗಲಿರುವ ಪ್ರಮಾಣ ಕಡಿಮೆ ಎಂದು ಹೇಳಲಾಗಿದೆ.