ಕರ್ನಾಟಕ

karnataka

ETV Bharat / sports

ಮಹಾಮಾರಿ ಕೊರೊನಾ ಭೀತಿ: ಐಪಿಎಲ್​​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ ದೆಹಲಿ ಸರ್ಕಾರ! - ದೆಹಲಿ ಸರ್ಕಾರ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೇಲೆ ಕೊರೊನಾ ಕರಿಛಾಯೆ ಬಿದ್ದಿದ್ದು, ದೆಹಲಿಯಲ್ಲಿ ಪ್ರಸಕ್ತ ಸಾಲಿನ ಟೂರ್ನಿ ನಡೆಸದಿರುವ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಹತ್ವದ ವಿಷಯ ಬಹಿರಂಗಗೊಂಡಿದೆ.

Delhi govt bans sports gathering, including IPL
Delhi govt bans sports gathering, including IPL

By

Published : Mar 13, 2020, 1:16 PM IST

ನವದೆಹಲಿ:ಮಹಾಮಾರಿ ಕೊರೊನಾ ಸೋಂಕು ಹರಡುವ ಕಾರಣಕ್ಕಾಗಿ ಈ ಸಲದ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರೀಡಾಭಿಮಾನಿಗಳಿಲ್ಲದೇ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​​ ನಡೆಸದಿರುವ ಸಂಬಂಧ ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.

ಈಗಾಗಲೇ ದೆಹಲಿ ಸರ್ಕಾರ ಎಲ್ಲ ರೀತಿಯ ಕ್ರೀಡೆ ಬ್ಯಾನ್​ ಮಾಡಿ ಆದೇಶ ಹೊರಹಾಕಿದ್ದು, ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ನಡೆಸದಿರುವ ಮುಂದಾಗಿದೆ. 200ಕ್ಕಿಂತಲೂ ಹೆಚ್ಚಿನ ಜನರು ಒಟ್ಟಿಗೆ ಸೇರುವ ಕಾರ್ಯಕ್ರಮಗಳ ಮೇಲೆ ನಿಷೇಧ ಹಾಕಿರುವ ಕೇಜ್ರಿವಾಲ್​ ಸರ್ಕಾರ, ಶಾಲೆ, ಕಾಲೇಜ್​ ಹಾಗೂ ಸಿನಿಮಾ ಹಾಲ್​ಗಳನ್ನ ಮಾರ್ಚ್​​ 31ರವರೆಗೆ ಬಂದ್​ ಮಾಡಿ ಮಹತ್ವದ ನಿರ್ಧಾರ ಹೊರಹಾಕಿದೆ.

ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ

ಮುಂದಿನ ಆದೇಶ ಹೊರ ಬೀಳುವವರೆಗೂ ದೆಹಲಿಯಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಸದಿರುವ ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಹೇಳಿದ್ದಾರೆ.. ದೇಶದಲ್ಲಿ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ ಭಾರತದಲ್ಲೂ 70ರ ಗಡಿ ದಾಟಿದ್ದು, ಕರ್ನಾಟಕದಲ್ಲಿ ಓರ್ವ ವೃದ್ಧ ಇದೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇನ್ನು ಮಹಾರಾಷ್ಟ್ರದಲ್ಲೂ ಯಾವುದೇ ಕ್ರೀಡಾಭಿಮಾನಿಗಳಿಲ್ಲದೇ ಐಪಿಎಲ್​ ಟೂರ್ನಿ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಲು ಮುಂದಾಗಿದೆ. ಮಾರ್ಚ್​ 29ರಂದು ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲಿದ್ದು, ದೆಹಲಿ ಕ್ಯಾಪಿಟಲ್ಸ್​ ತನ್ನ ತವರು ಪಂದ್ಯಗಳನ್ನ ದೆಹಲಿಯಲ್ಲಿ ಆಡಬೇಕಾಗಿತ್ತು. ಆದರೆ, ಇದೀಗ ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ ಹೊರಬಿದ್ದಿರುವ ಕಾರಣ, ಪ್ರಾಂಚೈಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ABOUT THE AUTHOR

...view details