ಹೈದರಾಬಾದ್: ವೇಗಿ ಮೊಹಮ್ಮದ್ ಸಿರಾಜ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಂಕಷ್ಟ ಮತ್ತು ಕರ್ತವ್ಯ ನಿಷ್ಠೆ ಎರಡು ಪ್ರಮುಖ ಪಾತ್ರ ವಹಿಸಿವೆ ಎಂದು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.
"ಗಬ್ಬಾದಲ್ಲಿ ನಡೆದ ಟೆಸ್ಟ್‌ಗಳಲ್ಲಿ 13 ವಿಕೆಟ್ ಪಡೆದ ಸಿರಾಜ್ ಆಸ್ಟ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿಸಿದ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಪ್ರಾರಂಭವಾಗುವ ಮೊದಲು, ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡ. ಆದರೆ ಅವನು ತನ್ನ ತಂದೆಯ ಕನಸನ್ನು ಈಡೇರಿಸಲು ಆಸ್ಟ್ರೇಲಿಯಾದಲ್ಲಿಯೇ ಇರಲು ನಿರ್ಧರಿಸಿದ. ಸಿರಾಜ್ ಅವರು ಹಸಿವು ಮತ್ತು ಕೋಪ ಎರಡನ್ನೂ ಹೊಂದಿದ್ದಾರೆ. ನಾನು ಅವನನ್ನು ಹೈದರಾಬಾದ್ನಲ್ಲಿ ನೆಟ್ನಲ್ಲಿ ಅಭ್ಯಾಸ ಮಾಡುವಾಗ ನೋಡಿದ್ದೆ. ಆ ಸಮಯದಲ್ಲಿ, ನಾನು ವಿವಿಎಸ್ ಲಕ್ಷ್ಮಣ್ ಅವರಿಗೆ ಹೇಳಿದೆ, ಸಿರಾಜ್ ಉತ್ತಮ ಪ್ರದರ್ಶನ ತೋರುತ್ತಿದ್ದಾನೆ. ಇನ್ನೂ ಹೈದರಾಬಾದ್ ಪರ ಆಡಲಿಲ್ಲವೇ? ನೀವು ಅವನನ್ನು ಬಳಸಬಹುದು? ಎಂದೆ. ಅದಕ್ಕೆ ಅವರು ತಲೆಯಾಡಿಸಿದರು. ಆದರೆ ಆ ವರ್ಷ ಅವನು ಹೆಚ್ಚು ಆಡಲಿಲ್ಲ" ಎಂದರು.