ಕರಾಚಿ:10 ವರ್ಷಗಳ ನಂತರ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಪಾಕಿಸ್ತಾನ ತಂಡ 2-0ದಿಂದ ವಶಪಡಿಸಿಕೊಂಡಿದೆ.
ಬುಧವಾರ ನಡೆದ ಮೂರನೆ ಅಂತಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ಆರಂಭಿಕ ಬ್ಯಾಟ್ಸ್ಮನ್ ಗುಣತಿಲಕ (133)ಅವರ ಆಕರ್ಷಕ ಶತಕದ ನೆರವಿನಿಂದ 50 ಓವರ್ಗಳಲ್ಲಿ 297 ರನ್ಗಳಿತು.
ಪಾಕ್ ಪರ ಮೊಹಮ್ಮದ್ ಅಮೀರ್ 3 , ಶೆನ್ವಾರಿ, ವಹಾಬ್ ರಿಯಾಜ್, ಶದಾಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದರು. ಲಂಕಾ ತಂಡ ಬೃಹತ್ ಮೊತ್ತ ಕನಸಿಗೆ ಕಡಿವಾಣ ಹಾಕಿದರು.
298 ರನ್ಗಳ ಗುರಿ ಪಡೆದ ಪಾಕಿಸ್ತಾನ ಫಖರ್ ಝಮಾನ್ (76) ಅಬಿದ್ ಅಲಿ (74) ಹಾಗೂ ಹ್ಯಾರೀಸ್ ಸೊಹೈಲ್(56) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪಾಕ್ ತಂಡ ಈ ಗೆಲುವಿನ ಮೂಲಕ ತವರಿನಲ್ಲಿ ದಶಕಗಳ ನಂತರ ನಡೆದ ಸರಣಿ ಗೆದ್ದು ಸಂಭ್ರಮಿಸಿತು. ಅಬಿದ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.