ಕರ್ನಾಟಕ

karnataka

ETV Bharat / sports

6,6,4,4,6,6 ಟಿ-20ಯಲ್ಲಿ ಪಾಕ್​ ಬೌಲರ್​ ಬೆವರಿಳಿಸಿದ ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್​! - ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್​

ಗ್ಲೋಬಲ್​ ಟಿ-20 ಕ್ರಿಕೆಟ್​​​ ಟೂರ್ನಿಯಲ್ಲಿ ವೆಸ್ಟ್​ ಇಂಡೀಸ್​ ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್​ ಅಬ್ಬರ ಜೋರಾಗಿದ್ದು, ಪಾಕ್​ ಬೌಲರ್​ ಓವರ್​​ನಲ್ಲಿ ಬರೋಬ್ಬರಿ 32ರನ್​ಗಳಿಸಿದ್ದಾರೆ.

ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್

By

Published : Aug 3, 2019, 4:18 PM IST

ಒಂಟಾರಿಯೋ:ಗ್ಲೋಬಲ್​​ ಟಿ-20 ಕ್ರಿಕಟ್​ ಟೂರ್ನಿಯಲ್ಲಿ ವೆಸ್ಟ್​ ಇಂಡೀಸ್​ನ ಬ್ಯಾಟಿಂಗ್​ ದೈತ್ಯ ಕ್ರಿಸ್​ ಗೇಲ್​ ಅಬ್ಬರ ಜೋರಾಗಿದ್ದು, ಇದೀಗ ಒಂದೇ ಓವರ್​​ನಲ್ಲಿ ಬರೋಬ್ಬರಿ 32ರನ್​ಗಳಿಕೆ ಮಾಡುವ ಮೂಲಕ ಪಾಕ್​ ಬೌಲರ್​ ಬೆವರಿಳಿಸಿದ್ದಾರೆ.

ವ್ಯಾಂಕೋವರ್ ನೈಟ್ಸ್ ತಂಡದ ನಾಯಕರಾಗಿರುವ ಗೇಲ್ 13ನೇ ಓವರ್​ ಎಸೆದ ಶಾದಾಬ್​ ಖಾನ್​​ ಬೌಲಿಂಗ್​​ನಲ್ಲಿ ನಾಲ್ಕು ಸಿಕ್ಸ್​ ಹಾಗೂ ಎರಡು ಬೌಂಡರಿ ಸಿಡಿಸಿ 32ರನ್​ಗಳಿಕೆ ಮಾಡಿದ್ದಾರೆ. ಜತೆಗೆ ಕೇವಲ 44 ಎಸೆತಗಳಲ್ಲಿ ಬರೋಬ್ಬರಿ 94ರನ್​ಗಳಿಕೆ ಮಾಡಿದ್ದು, ಆರು ರನ್​ಗಳಿಂದ ಶತಕ ವಂಚಿತರಾಗಿದ್ದಾರೆ. ಗೇಲ್​ ​ಇನ್ನಿಂಗ್ಸ್​​ನಲ್ಲಿ ಒಟ್ಟು 9 ಸಿಕ್ಸ್​ ಹಾಗೂ 6 ಬೌಂಡರಿ ಸೇರಿಕೊಂಡಿದ್ದವು. ಇದಕ್ಕೂ ಮೊದಲಿನ ಪಂದ್ಯದಲ್ಲಿ ಗೇಲ್​​ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 122 ರನ್​ಗಳಿಕೆ ಮಾಡಿದದರು.

ರಾಯಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಗೇಲ್​ ಈ ಸಾಧನೆ ನಿರ್ಮಿಸಿದ್ದು, ಈ ಪಂದ್ಯದಲ್ಲಿ ಗೇಲ್​ ನೇತೃತ್ವದ ವ್ಯಾಂಕೋವರ್​ ತಂಡ ಆರು ವಿಕೆಟ್​ಗಳ ಗೆಲುವಿನ ನಗೆ ಬೀರಿದೆ.

ABOUT THE AUTHOR

...view details