ಕರ್ನಾಟಕ

karnataka

ETV Bharat / sports

'ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ ಗೌರವವಿಲ್ಲ'... ವಿದಾಯದ ವೇಳೆ ಕ್ರಿಸ್ ಗೇಲ್ ಭಾವುಕ ನುಡಿ - ಕ್ರಿಸ್ ಗೇಲ್ ವಿದಾಯ ಘೋಷಣೆ

ಎಂಎಸ್​ಎಲ್​ ಟೂರ್ನಿಯ ಆರು ಪಂದ್ಯಗಳಲ್ಲಿ ಗೇಲ್ ಕೇವಲ 101 ರನ್ ಮಾತ್ರವೇ ಗಳಿಸಲು ಶಕ್ತರಾಗಿದ್ದರು. ಕಳಪೆ ಫಾರ್ಮ್, ​ ಗೇಲ್ ಬ್ಯಾಟಿಂಗ್ ಮೇಲೆ ಹೆಚ್ಚಿನ ಒತ್ತಡ ತಂದಿತ್ತು.

Chris Gayle says goodbye to MSL,ಎಂಎಸ್​​ಎಲ್​ ಟೂರ್ನಿಗೆ ಗೇಲ್ ಗುಡ್​ಬೈ
ಕ್ರಿಸ್ ಗೇಲ್

By

Published : Nov 26, 2019, 7:48 AM IST

ಹೈದರಾಬಾದ್:ಕೆರಿಬಿಯನ್​ ಬ್ಯಾಟಿಂಗ್​ ದೈತ್ಯ ಕ್ರಿಸ್ ಗೇಲ್​ ಝಾನ್ಸಿ ಸೂಪರ್​ ಲೀಗ್​ಗೆ ​(Mzansi Super League) ವಿದಾಯ ಘೋಷಿಸಿದ್ದಾರೆ.

ಟಿ-20 ಪಂದ್ಯಗಳಿಗೆ ಹೇಳಿ ಮಾಡಿಸಿದಂತಿರುವ ಗೇಲ್ ಬ್ಯಾಟಿಂಗ್ ವೈಖರಿ ಎಂಎಸ್​ಎಲ್​ ಟೂರ್ನಿಯಲ್ಲಿ ಸಂಪೂರ್ಣವಾಗಿ ಮಂಕಾಗಿತ್ತು. ಇದೇ ಕಳಪೆ ಫಾರ್ಮ್​ ಕಾರಣದಿಂದ ಗೇಲ್ ಸದ್ಯ ಎಂಎಸ್​ಎಲ್​ ಟೂರ್ನಿಗೆ ಗುಡ್​ಬೈ ಹೇಳಿದ್ದಾರೆ.

ಎಂಎಸ್​ಎಲ್​ ಟೂರ್ನಿಯ ಆರು ಪಂದ್ಯಗಳಲ್ಲಿ ಗೇಲ್ ಕೇವಲ 101 ರನ್ ಮಾತ್ರವೇ ಗಳಿಸಲು ಶಕ್ತರಾಗಿದ್ದರು. ಕಳಪೆ ಫಾರ್ಮ್​ ಗೇಲ್ ಬ್ಯಾಟಿಂಗ್ ಮೇಲೆ ಹೆಚ್ಚಿನ ಒತ್ತಡ ನೀಡಿತ್ತು ಎನ್ನಲಾಗಿದೆ.

ಬೇಸರ ಹೊರಹಾಕಿದ ಬ್ಯಾಟಿಂಗ್ ದೈತ್ಯ:

"ನಾನು ಸತತ ಎರಡು-ಮೂರು ಪಂದ್ಯ ಆಡದೇ ಇದ್ದ ತಕ್ಷಣ ಗೇಲ್ ತಂಡಕ್ಕೆ ಭಾರ ಎನ್ನುವ ಭಾವನೆ ಎಲ್ಲರಲ್ಲೂ ಬಂದಿರುತ್ತದೆ. ಇದು ಒಂದು ತಂಡ ಬಗ್ಗೆ ನಾನು ಹೇಳುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಆಡುತ್ತಿರುವ ಎಲ್ಲ ಟಿ-20 ಲೀಗ್ ಹಾಗೂ ಫ್ರಾಂಚೈಸಿ ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಕಳಪೆ ಫಾರ್ಮ್​ನಲ್ಲಿದ್ದಾಗ ನನಗೆ ಕೊಂಚವೂ ಗೌರವ ದೊರೆಯುವುದೇ ಇಲ್ಲ. ಆ ವೇಳೆ, ನನ್ನ ಹಿಂದಿನ ಎಲ್ಲ ದಾಖಲೆಗಳು ಮರೆತು ಹೋಗಿರುತ್ತದೆ. ಗೇಲ್​ ರನ್​ ಗಳಿಸಿಲ್ಲ ಎಂದಾಕ್ಷಣವೇ ಆತನ ಕರಿಯರ್ ಮುಗಿಯಿತು ಎನ್ನುವ ಮಾತು ಬಂದಿರುತ್ತದೆ. ಅದರೆ ಇಂತಹ ಮಾತು ಹಾಗೂ ಘಟನೆಯಲ್ಲಿ ಬದುಕಿದ್ದೇನೆ ಮತ್ತು ಅದರಿಂದ ಈಗ ಹೊರಬಂದಿದ್ದೇನೆ" ಎಂದು ಕ್ರಿಸ್ ಗೇಲ್​ ವಿದಾಯದ ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಮನದಾಳದ ನೋವನ್ನು ಹೊರಹಾಕಿದ್ದಾರೆ.

ABOUT THE AUTHOR

...view details