ಒಂಟಾರಿಯೋ: ಟಿ-20 ಲೀಗ್ಗಳಲ್ಲಿ ಈಗಷ್ಟೇ ಚಿಗುರೊಡೆಯುತ್ತಿರುವ ಕೆನಡಾದ ಗ್ಲೋಬಲ್ ಟಿ-20 ಲೀಗ್ನಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಆರ್ಭಟ ಮುಂದುವರೆದಿದ್ದು, ತಮ್ಮ ವೃತ್ತಿ ಜೀವನದ 22ನೇ ಶತಕ ದಾಖಲಿಸಿದ್ದಾರೆ.
ಟಿ-20 ಕ್ರಿಕೆಟ್ನಲ್ಲಿ 22ನೇ ಶತಕ ಸಿಡಿಸಿದ ಯೂನಿವರ್ಸಲ್ ಬಾಸ್... ಆರ್ಸಿಬಿ ಗರಿಷ್ಠ ರನ್ ದಾಖಲೆಯೂ ಬ್ರೇಕ್
ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ನಲ್ಲಿ 22ನೇ ಸತಕ ಸಿಡಿಸುವ ಮೂಲಕ ತಾವೇ ಚುಟುಕು ಕ್ರಿಕೆಟ್ನ ಸಮ್ರಾಟ ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ವ್ಯಾಂಕೋವರ್ ನೈಟ್ಸ್ ತಂಡದ ನಾಯಕರಾಗಿರುವ ಗೇಲ್ ಲೀಗ್ನ 8ನೇ ಪಂದ್ಯದಲ್ಲಿ ಮಾಂಟ್ರಿಯಲ್ ಟೈಗರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 47 ಎಸೆತಗಳಲ್ಲಿ ಶತಕ ಸಿಡಿಸಿದ ಗೇಲ್ ಟಿ-20 ಕ್ರಿಕೆಟ್ ವೃತ್ತಿ ಜೀವನದಲ್ಲಿ 22ನೇ ಶತಕ ಪೂರ್ಣಗೊಳಿಸಿದರು. ಒಟ್ಟಾರೆ 54 ಎಸೆತಗಳನ್ನು ಎದುರಿಸಿದ ಅವರು, 7 ಬೌಂಡರಿ, 12 ಸಿಕ್ಸರ್ ಸಿಡಿಸಿದರು. ದುರಂತವೆಂದರೆ ಈ ಪಂದ್ಯ ಮಳೆಯ ಕಾರಣ ರದ್ದಾಗುವ ಮೂಲಕ ಎರಡೂ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು.
ಗೇಲ್ಗೆ ಸಾಥ್ ನೀಡಿದ ತೊಬಿಯಸ್ ವೈಸ್ 19 ಎಸೆತಗಳಲ್ಲಿ 51, ವಾನ್ ಡರ್ ಡಾಸ್ಸೆನ್ 25 ಎಸೆತಗಳಲ್ಲಿ 56, ವಾಲ್ಟನ್ 18 ಎಸೆತಗಳಲ್ಲಿ 29 ರನ್ ಗಳಿಸಿದರು. ಈ ಪಂದ್ಯದಲ್ಲಿ ನೈಟ್ಸ್ ತಂಡ 20 ಓವರ್ಗಳಲ್ಲಿ 276 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಎರಡನೇ ಗರಿಷ್ಠ ರನ್ ದಾಖಲಿಸಿತು. ಇನ್ನು ಟಿ-20 ಇತಿಹಾಸದಲ್ಲಿ 278 ರನ್ ಗಳಿಸಿರುವ ಅಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದೆ. ಆರ್ಸಿಬಿ 263 ರನ್ಗಳೊಡನೆ ಮೂರನೇ ಸ್ಥಾನದಲ್ಲಿದೆ.