ನವದೆಹಲಿ:ಭಾರತ ಮತ್ತ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿಆಟಗಾರ ಕ್ರಿಸ್ಗೇಲ್ ಅವರುಬ್ರಿಯನ್ ಲಾರಾ ದಾಖಲೆ ಮುರಿದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದ ಹೆಗ್ಗಳಿಕೆಗೆ ಬ್ರಿಯನ್ ಲಾರಾ ಪಾತ್ರರಾಗಿದ್ದರು. 299 ಪಂದ್ಯಗಳಲ್ಲಿ ಲಾರಾ ಗಳಿಸಿದ್ದ 10,348 ರನ್ ಇದುವರೆಗಿನ ದಾಖಲೆಯಾಗಿತ್ತು.
ಟ್ರಿನಿಡಾಡ್ನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಗೇಲ್ 7 ರನ್ (297 ನೇ ಪಂದ್ಯ) ಗಳಿಸಿದಾಗ ಲಾರಾ ದಾಖಲೆಯನ್ನು ಪುಡಿಗಟ್ಟಿದ್ದರು. ಅಲ್ಲದೆ, ಗೇಲ್ ವೆಸ್ಟ್ ಇಂಡೀಸ್ ಪರ 297 ಪಂದ್ಯಗಳಾಡಿದ್ದು, ಐಸಿಸಿ ಇಲೆವನ್ನಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಿದ್ದಾರೆ. ಒಟ್ಟು ಅವರು 300 ಏಕದಿನ ಪಂದ್ಯಗಳನ್ನಾಡಿರುವ ಸರ್ದಾರ್ ಆಗಿದ್ದಾರೆ. ಈ ಸರಣಿ ಬಳಿಕ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿರುವ ಗೇಲ್ನ ದೊಡ್ಡ ಸಾಧನೆಯಾಗಿದೆ.
ಏಕದಿನದಲ್ಲಿ ವೆಸ್ಟ್ ವಿಂಡೀಸ್ ಆಟಗಾರರು ಅತಿಹೆಚ್ಚು ರನ್ ಗಳಿಸಿದವರು:
ಕ್ರಿಸ್ಗೇಲ್ - 10,353
ಬ್ರಿಯಾನ್ ಲಾರಾ - 10348
ಎಸ್.ಚಂದ್ರಪಾಲ್ - 8778
ಡೆಸ್ಮೋಡ್ ಹೇನ್ಸ್ - 8648
ವಿವಿಯನ್ ರಿಚರ್ಡ್ಸ್ - 6721
ರಿಚೈ ರಿಚರ್ಡ್ಸ್ - 6248