ಲೀಡ್ಸ್:ವೃತ್ತಿ ಬದುಕಿನ ಕೊನೆ ಏಕದಿನ ವಿಶ್ವಕಪ್ ಆಡಿದ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ತಮ್ಮ ಕೊನೆಯ ಪಂದ್ಯದಲ್ಲೂ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 7ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ದುರ್ಬಲ ತಂಡದ ವಿರುದ್ಧ ಬ್ಯಾಟಿಂಗ್ ದೈತ್ಯ ಗೇಲ್ ರನ್ಮಳೆ ಹರಿಸುತ್ತಾರೆಂದು ಚಾತಕ ಪಕ್ಷಿಗಳಂತೆ ಕಾಯ್ದು ಕುಳಿತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ವಿಶ್ವಕಪ್ನಲ್ಲಿ ಈ ಹಿಂದಿನ ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಗೇಲ್ ಯಾವುದೇ ಪಂದ್ಯಗಳಲ್ಲೂ ಶತಕ ಸಿಡಿಸಿಲ್ಲ. ಪಾಕಿಸ್ತಾನದ ವಿರುದ್ಧ 50ರನ್, ಆಸ್ಟ್ರೇಲಿಯಾ ವಿರುದ್ಧ 21, ಇಂಗ್ಲೆಂಡ್ ವಿರುದ್ಧ 36 ರನ್, ಬಾಂಗ್ಲಾ ವಿರುದ್ಧ 0, ನ್ಯೂಜಿಲ್ಯಾಂಡ್ ವಿರುದ್ಧ 87ರನ್, ಭಾರತದ ವಿರುದ್ಧ 6ರನ್ ಹಾಗೂ ಶ್ರೀಲಂಕಾ ವಿರುದ್ಧ ಕೇವಲ 35 ರನ್ಗಳಿಕೆ ಮಾಡಿದ್ದಾರೆ. ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ 7ರನ್ಗಳಿಕೆ ವಿಕೆಟ್ ಒಪ್ಪಿಸಿದರು.
ಏಕದಿನ ಕ್ರಿಕೆಟ್ ಪಂದ್ಯಗಳಿಂದಲೇ 1,118 ಬೌಂಡರಿ ಹಾಗೂ 326 ಸಿಕ್ಸರ್ ಬಾರಿಸಿರುವ ಗೇಲ್, ಈ ವಿಶ್ವಕಪ್ನ ಮೆಗಾ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವುದಂತೂ ಸುಳ್ಳಲ್ಲ.