ಹೈದರಾಬಾದ್ : ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ತಂಡದ ಉಪನಾಯಕ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಯುಎಇ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ - ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್
ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ತಂಡದ ಉಪನಾಯಕ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕ್ವಾರಂಟೈನ್ನಲ್ಲಿದ್ದಾರೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
![ಯುಎಇ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ United Arab Emirates cricket team](https://etvbharatimages.akamaized.net/etvbharat/prod-images/768-512-10161950-thumbnail-3x2-abc.jpg)
ಯುಎಇ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ
ಸದ್ಯ ಚಿರಾಗ್ ಸೂರಿ ಮತ್ತು ಆರ್ಯನ್ ಲಕ್ರಾ ಕ್ವಾರಂಟೈನ್ನಲ್ಲಿದ್ದು, ಅವರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅವರ ಆರೋಗ್ಯ ಉತ್ತಮವಾಗಿದೆ ಎಂದು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ : ಕೋವಿಡ್ನಿಂದ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಒಲಿಂಪಿಕ್ ನಡೆಸುವುದಾಗಿ ಜಪಾನ್ ಪ್ರಧಾನಿ ಪ್ರತಿಜ್ಞೆ