ನವದೆಹಲಿ: ಕೊರೊನಾ ಸೋಂಕಿಗೆ ಭಾನುವಾರ ಮೃತಪಟ್ಟ ಚೇತನ್ ಚೌಹಾಣ್ ಭಾರತ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಅವರ ನೆಚ್ಚಿನ ಆರಂಭಿಕರಾಗಿ ಭಾರತೀಯ ಕ್ರಿಕೆಟ್ಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಚೌಹಾಣ್ ಕ್ರಿಕೆಟ್ ಜಗತ್ತಿನಲ್ಲಿ ಹೆಲ್ಮೆಟ್ ಬಳಸದ ಕಾಲದಲ್ಲೇ ಭಾರತ ತಂಡದ ಪರ ಆಡಿದ್ದರು. ಅವರು ತಂತ್ರಗಾರಿಕೆಯಲ್ಲಿ ಮಿತಗಳಿದ್ದವು. ಆದರೆ, ಅವರ ಸ್ಟ್ರೋಕ್ಪ್ಲೇ ಕೂಡ ನಿರರ್ಗಳವಾಗಿರಲಿಲ್ಲ. ಆದರೆ, ಅವರೊಬ್ಬ ಸುನಿಲ್ ಗವಾಸ್ಕರ್ ಅವರ ನಂಬಿಕಾರ್ಹ ಆರಂಭಿಕ ಜೊತೆಗಾರರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ರಕ್ಷಣಾತ್ಮಕ ಆಟ ಸದಾ ಸುನಿಲ್ ಗವಾಸ್ಕರ್ ಅವರಿಗೆ ಸರಾಗವಾಗಿ ರನ್ಗಳಿಸಲು ನೆರವಾಗುತ್ತಿತ್ತು.
ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಜುಲೈ 21 1947ರಲ್ಲಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಜನಿಸಿದ್ದರು. ಅವರು 1970 ಮತ್ತು 80ರ ದಶಕದಲ್ಲಿ ಎದುರಾಳಿ ಬೌಲರ್‌ಗಳ ಜೊತೆಗೆ ಮಾತಿನ ವಾಗ್ವಾದ ಮಾಡುವ ಧೈರ್ಯ ಮಾಡುತ್ತಿದ್ದರು. ಅವರು ಸುನಿಲ್ ಗವಾಸ್ಕರ್ ಅವರ ಜೊತೆ ಹಲವಾರು ಸಂದರ್ಭಗಳಲ್ಲಿ ಉತ್ತಮ ಜೊತೆಯಾಟ ನೀಡಿದ್ದಾರೆ. ಗವಾಸ್ಕರ್ ಮೈದಾನದಲ್ಲಿ ವೀರಾವೇಶದ ಆಟ ಪ್ರದರ್ಶನ ಮಾಡುತ್ತಿದ್ದರೆ ಚೌಹಾಣ್ ಅವರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು.
ಚೇತನ್ ಚೌಹಾಣ್ ಸುನಿಲ್ ಗವಾಸ್ಕರ್ ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿರುವ ಚೌಹಾಣ್ ಸುನಿಲ್ ಗವಾಸ್ಕರ್ ಅವರ ಜೊತೆ 10 ಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಚೌಹಾಣ್ ಅಗಾಧವಾದ ತಾಳ್ಮೆಗೆ ಹೆಸರುವಾಸಿಯಾಗಿದ್ದರು ಮತ್ತು ವೇಗದ ಬೌಲರ್‌ಗಳ ಮುಂದೆ ಧೈರ್ಯವಾಗಿ ಎದೆಯೊಡ್ಡಿ ನಿಲ್ಲುವ ದೃಢ ನಿಶ್ಚಯ ಅವರಲ್ಲಿ ಅತ್ಯುತ್ತಮವಾಗಿತ್ತು
1969ರಲ್ಲಿ ತಮ್ಮ 22 ವರ್ಷದ ವಯಸ್ಸಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪದಾರ್ಪಣ ಮಾಡಿದ್ದ ಚೌಹಾಣ್ 31ರ ಸರಾಸರಿಯಲ್ಲಿ 2084 ರನ್ ಗಳಿಸಿದ್ದಾರೆ. ಅವರು ಭಾರತ ತಂಡದ ಖಾಯಂ ಆಟಗಾರರಾಗಿರಲಿಲ್ಲ. ಏಕೆಂದರೆ ಅವರ ಸ್ಥಿರ ಪ್ರದರ್ಶನ ತೋರಿಸುವಲ್ಲಿ ವಿಫಲರಾಗುತ್ತಿದ್ದರಿಂದ ಅವರು ಆಗಿಂದಾಗ್ಗೆ ತಂಡದಿಂದ ಹೊರ ಬೀಳುತ್ತಿದ್ದರು.
ಆದರೂ ಸುನಿಲ್ ಗವಾಸ್ಕರ್ ಅವರ ಜೊತೆ ಕೆಲವು ಅದ್ಭುತ ಜೊತೆಯಾಟದಲ್ಲಿ ಚೌಹಾಣ್ ಹೆಸರುವಾಸಿಯಾಗಿದ್ದರು. 1979ರಲ್ಲಿ ಓವೆಲ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 213 ರನ್ಗಳ ಜೊತೆಯಾಟದ ಪ್ರದರ್ಶನ ನೀಡಿದ್ದು ಅವರ ಜೀವನದ ಶ್ರೇಷ್ಠ ಇನ್ನಿಂಗ್ಸ್ಗಳಲ್ಲಿ ಒಂದು. ಈ ಮೂಲಕ ಮರ್ಚೆಂಟ್ ಹಾಗೂ ಮುಷ್ತಾಕ್ ಅಲಿ ಅವರು 1936ರಲ್ಲಿ ನಿರ್ಮಿಸಿದ್ದ 203 ರನ್ಗಳ ದಾಖಲೆಯನ್ನು ಮುರಿದಿದ್ದರು. ಆ ಪಂದ್ಯದಲ್ಲಿ ಚೌಹಾಣ್ 80 ರನ್ಗಳಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಒಂದೂ ಶತಕ ದಾಖಲಿಸಿದ ಅವರು 5 ಬಾರಿ 80 ಕ್ಕೂ ಹೆಚ್ಚು ರನ್ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 97.
ಚೇತನ್ ಚೌಹಾಣ್ ಸುನಿಲ್ ಗವಾಸ್ಕರ್ ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು ಮಹಾರಾಷ್ಟ್ರ ಹಾಗೂ ದೆಹಲಿ ತಂಡಗಳ ಪರ ಆಡಿದ್ದಾರೆ. ಅವರು ನಾರ್ಥ್ಜೋನ್ ಸೆಲೆಕ್ಟರ್ ಕೂಡ ಆಗಿದ್ದರು. 2016-17ರವರೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ರಾಜಕೀಯದಲ್ಲೂ ಸಕ್ರಿಯರಾಗಿದ್ದ ಚೌಹಾಣ್ ಉತ್ತರ ಪ್ರದೇಶದ ಅಮ್ರೋಹ ಕ್ಷೇತ್ರದಿಂದ 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1991 ರಲ್ಲಿ ಹಾಗೂ 1998ರಲ್ಲಿ ವಿಜಯ ಸಾಧಿಸಿದ್ದ ಅವರು ನಂತರ ಉತ್ತರ ಪ್ರದೇಶದ ಯುವ ಮತ್ತು ಕ್ರೀಡಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಜುಲೈ 12ರಂದು ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 16ರಂದು ಕೆಲವು ವಯೋಸಹಜ ಕಾಯಿಗೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ತಮ್ಮ73ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.