ಕರ್ನಾಟಕ

karnataka

ETV Bharat / sports

ಬ್ರಾವೋ ಬೌಲಿಂಗ್​ ಕೈಚಳಕದ ಮುಂದೆ ನಡೆಯದ ಡೆಲ್ಲಿ ಬಾಯ್ಸ್​ ಆಟ... ಸಿಎಸ್​ಕೆಗೆ 6 ವಿಕೆಟ್​ಗಳ ಭರ್ಜರಿ ಗೆಲುವು - ಡೆಲ್ಲಿ ಕ್ಯಾಪಿಟಲ್​

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಡೆಲ್ಲಿ, ಅನುಭವಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 6 ವಿಕೆಟ್​ಗಳ ಸೋಲನುಭವಿಸಿದೆ.

csk win

By

Published : Mar 26, 2019, 11:45 PM IST

ನವದೆಹಲಿ:ಇಲ್ಲಿನ ಫಿರೋಜ್​ ಷಾ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​6ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಡೆಲ್ಲಿ ನೀಡಿದ 148 ರನ್​ಗಳನ್ನು ಬೆನ್ನತ್ತಿದ ಸೂಪರ್​ ಕಿಂಗ್ಸ್​ 19.4ಓವರ್​ಗಳಲ್ಲಿ 4 ವಿಕೆಟ್​ ಕಳೆದು ಕೊಂಡು ಗುರಿ ತಲುಪಿತು. ಆರಂಭಿಕ ಅಂಬಾಟಿ ರಾಯುಡು ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ರೈನಾ(30) ಹಾಗೂ ವಾಟ್ಸನ್​(46) ಜಾಧವ್​ (27)ರನ್​ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ನಂತರ ನಾಯಕ ಧೋನಿ ಔಟಾಗದೆ 32 ಹಾಗೂ ಬ್ರಾವೋ 4 ರನ್​ಗಳಿಸಿ ಇನ್ನು 2 ಎಸೆತಗಳಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಡೆಲ್ಲಿ ಪರ ಅಮಿತ್​ ಮಿಶ್ರಾ 2, ಇಶಾಂತ್​ ಶರ್ಮಾ 1, ರಬಡಾ ಒಂದು ವಿಕೆಟ್​ ಪಡೆದರು.

ಇದಕ್ಕು ಮುನ್ನ ​ ಟಾಸ್​​ ಗೆದ್ದುಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ ಧವನ್​ (51) ಪೃಥ್ವಿ ಶಾ (24) ರನ್​ಗಳಿಸಿದರೆ, ಮುಂಬೈ ವಿರುದ್ಧ ಅಬ್ಬರಿಸಿದ್ದರಿಷಭ್​ ಪಂತ್​ ಕೇವಲ 25 ಕ್ಕೆ ವಿಕೆಟ್​ ಒಪ್ಪಿಸಿದರು. ಒಟ್ಟಾರೆ20 ಓವರ್​ಗಳಲ್ಲಿ 147 ರನ್​ಗಳಿಸಲಷ್ಟೇ ಶಕ್ತವಾಯಿತು.

ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ರಾವೋ 33ಕ್ಕೆ3, ಜಡೇಜಾ 23ಕ್ಕೆ1, ದೀಪಕ್​ ಚಹಾರ್ 20ಕ್ಕೆ1​,ಇಮ್ರಾನ್​ ತಾಹೀರ್​ 20ಕ್ಕೆ1 ವಿಕೆಟ್​ ಪಡೆಯುವ ಮೂಲಕ ಎದುರಾಳಿ ಪಡೆಯನ್ನ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಈ ಗೆಲುವಿನೊಂದಿಗೆ ಸಿಎಸ್​ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ಮಾರ್ಚ್​ 31 ರಂದು ರಾಜಸ್ಥಾನ್​ ರಾಯಲ್ಸ್​ ತಂಡವನ್ನು ಎದುರಿಸಲಿದೆ.

For All Latest Updates

ABOUT THE AUTHOR

...view details