ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಹೈದರಾಬಾದ್ ಮೇಲೆ ಸವಾರಿ ಮಾಡಿದೆ. ಇಂದಿನ ಪಂದ್ಯದಲ್ಲಿ 20ರನ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ ಕಳೆದುಕೊಂಡು 167ರನ್ಗಳಿಕೆ ಮಾಡಿತ್ತು. ತಂಡದ ಪರ ವ್ಯಾಟ್ಸನ್ 42ರನ್ ಹಾಗೂ ರಾಯುಡು 41ರನ್ಗಳಿಕೆ ಮಾಡಿದರು.
168ರನ್ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ವಾರ್ನರ್ ಕೇವಲ 9ರನ್ಗಳಿಕೆ ಮಾಡಿ ಪೆವಿಲಿಯನ್ ಸೇರಿಕೊಂಡ್ರೆ, ಪಾಂಡೆ 4ರನ್ಗಳಿಸಿದ್ದ ವೇಳೆ ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ವಿಕೆಟ್ ಕೀಪರ್ ಬ್ಯಾರಿಸ್ಟೋವ್ 23ರನ್ಗಳಿಸಿ ಬೌಲ್ಡ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ 57ರನ್ಗಳಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಕರ್ಣ ಶರ್ಮಾ ಯಶಸ್ವಿಯಾದರು. ಇದಾದ ಬಳಿಕ ಗರ್ಗ 16ರನ್, ವಿಜಯ್ ಶಂಕರ್ 12ರನ್, ರಾಶೀದ್ ಖಾನ್ 14ರನ್, ನದೀಮ್ 5ರನ್ಗಳಿಸಿದರು
ಚೆನ್ನೈ ಪರ ಕರ್ಣ ಶರ್ಮಾ, ಬ್ರಾವೋ ತಲಾ 2ವಿಕೆಟ್ ಪಡೆದುಕೊಂಡರೆ, ಕರನ್, ಜಡೇಜಾ ಹಾಗೂ ಠಾಕೂರ್ 1ವಿಕೆಟ್ ಪಡೆದುಕೊಂಡರು. ಈ ಗೆಲುವಿನೊಂದಿಗೆ ಸಿಎಸ್ಕೆ 8 ಪಂದ್ಯಗಳಲ್ಲಿ ಮೂರು ಗೆದ್ದು ಪ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ.