ದುಬೈ: ಕಳೆದು ಎರಡು ವಾರಗಳ ಹಿಂದೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗುವ ಮೂಲಕ ತಂಡದ ತರಬೇತಿಯಿಂದ ದೂರ ಉಳಿದಿದ್ದ ಸಿಎಸ್ಕೆ ತಂಡದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಪ್ರಸ್ತುತ ಸಂಪೂರ್ಣ ಗುಣಮುಖರಾಗಿದ್ದಾರೆ. ಸೆ.22ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ತಂಡದ ಅನುಭವಿಗಳಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ರ ಸೇವೆಯನ್ನು ಸಿಎಸ್ಕೆ ತಪ್ಪಿಸಿಕೊಳ್ಳುತ್ತಿದೆ. ಅದರ ಮಧ್ಯೆ ದೀಪಕ್ ಚಹಾರ್ ಮತ್ತು ಋತುರಾಜ್ ಗಾಯಕ್ವಾಡ್ ಕೊರೊನಾ ಪಾಸಿಟಿವ್ ಆದ ಕಾರಣ ತರಬೇತಿಯಿಂದ ಹೊರಬಿದ್ದಿದ್ದರು. ಆರಂಭಿಕ ಪಂದ್ಯಕ್ಕೆ 2 ದಿನಗಳಿರುವಾಗ ದೀಪಕ್ ಚಹಾರ್ ಕೋವಿಡ್-19 ಪರೀಕ್ಷೆಗೊಳಪಟ್ಟು ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ, ಗಾಯಕ್ವಾಡ್ಗೆ ಪಾಸಿಟಿವ್ ಬಂದಿದ್ದರಿಂದ ಕ್ವಾರಂಟೈನ್ ಮುಂದುವರಿಸಿದ್ದರು.