ಚೆನ್ನೈ: ಐಪಿಎಲ್ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಸೀಸನ್ನಲ್ಲಿ ಆಟಗಾರರ ಅಸ್ಥಿರ ಪ್ರದರ್ಶನದಿಂದ ಬೇಸತ್ತಿದ್ದು, ಜಾಧವ್, ರಾಯುಡು ಸೇರಿದಂತೆ ಕೆಲವು ದುಬಾರಿ ಆಟಗಾರರನ್ನು ತಂಡದಿಂದ ಕೈಬಿಡುವ ಚಿಂತನೆ ನಡೆಸಿದೆ.
ಇತ್ತೀಚೆಗೆ ನಿವೃತ್ತಿ ಘೋಷಿಸಿ ಮತ್ತೆ ಕ್ರಿಕೆಟ್ಗೆ ಮರಳಿರುವ ಅಂಬಾಟಿ ರಾಯುಡು ಅವರು ಕಳೆದ ಸೀಸನ್ನಲ್ಲಿ ರನ್ಗಳಿಸಲು ಪರದಾಡಿದ್ದರು. ಇನ್ನು ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಹೊರಬಂದಿರುವ ಕೇದಾರ್ ಜಾದವ್, ಹಿರಿಯ ಬ್ಯಾಟ್ಸ್ಮನ್ ಮುರುಳಿ ವಿಜಯ್ ಹಾಗೂ ಬೌಲರ್ಗಳ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಕರಣ್ ಶರ್ಮಾರನ್ನು ತಂಡದಿಂದ ಬಿಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಸಿಎಸ್ಕೆ ಬಿಡಬೇಕೆಂದಿರುವ ಆಟಗಾರರು ಈ ಆಟಗಾರರನ್ನು ಬಿಡಲು ಕಾರಣ?
ವರದಿಯ ಪ್ರಕಾರ ಈ 5 ಆಟಗಾರರನ್ನು ರಿಲೀಸ್ ಮಾಡಲು ಕಾರಣ ಅವರಿಗೆ ನೀಡಿರುವ ದುಬಾರಿ ಬೆಲೆ ಹಾಗೂ ಅವರ ಅಸ್ಥಿರ ಪ್ರದರ್ಶನ ಎಂದು ತಿಳಿದುಬಂದಿದ್ದು, ಅವರನ್ನು ತಂಡದಿಂದ ಬಿಟ್ಟು ಮತ್ತೆ ಕಡಿಮೆ ಬೆಲೆಗೆ ಖರೀದಿಸುವ ಆಲೋಚನೆಯಲ್ಲಿ ಸಿಎಸ್ಕೆ ಪ್ರಾಂಚೈಸಿ ಚಿಂತಿಸುತ್ತಿದೆ.
ಎರಡು ವರ್ಷ ನಿಷೇಧದ ಬಳಿಕ 2018ರಲ್ಲಿ ಐಪಿಎಲ್ಗೆ ವಾಪಾಸ್ ಬಂದಿದ್ದ ಸಿಎಸ್ಕೆ ರಾಯುಡುಗೆ 2.2 ಕೋಟಿ, ಜಾಧವ್ಗ 7.8 ಕೋಟಿ, ಮುರುಳಿ ವಿಜಯ್ಗೆ 2 ಕೋಟಿ, ಕರಣ್ ಶರ್ಮಾಗೆ 5 ಕೋಟಿ ಹಾಗೂ ಶಾರ್ದೂಲ್ ಠಾಕೂರ್ಗೆ 2 ಕೋಟಿ ನೀಡಿದೆ.
ಸ್ಪಿನ್ ವಿಭಾಗದಲ್ಲಿ ತಾಹೀರ್- ಜಡೇಜಾರ ನಡುವೆ ಕರಣ್ ಶರ್ಮಾಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ, ಇನ್ನು ಠಾಕೂರ್ ಎಕಾನಮಿ ಹೆಚ್ಚಿರುವುದರಿಂದ ಅವರನ್ನು ರಿಲೀಸ್ ಮಾಡಲು ಚಿಂತಿಸಿದೆ ಎನ್ನಲಾಗುತ್ತಿದೆ.
ನವೆಂಬರ್ 14 ಫ್ರಾಂಚೈಸಿಗೆ ಬೇಡದ ಆಟಗಾರರನ್ನು ಬಿಡಲು ಕೊನೆಯ ದಿನಾಂಕವಾಗಿದ್ದು, ಯಾವ ತಂಡ ಯಾರನ್ನು ಬಿಡಲಿದೆ ಎಂದು ಕಾದು ನೋಡಬೇಕಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ 2020ರ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.