ಕರ್ನಾಟಕ

karnataka

ETV Bharat / sports

ಹುತಾತ್ಮ ಯೋಧರ ವಿಚಾರದಲ್ಲಿ ಕೇಂದ್ರ ಅಣುಕಿಸಿ ಟ್ವೀಟ್​​: ಸಿಎಸ್​ಕೆ ತಂಡದ ವೈದ್ಯ ಅಮಾನತು! - ಸಿಎಸ್​ಕೆ ತಂಡದ ವೈದ್ಯ ಅಮಾನತು

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವೈದ್ಯರಾಗಿದ್ದ ಡಾ. ಮಧು ತಾವು ಮಾಡಿರುವ ಟ್ವೀಟ್​ನಿಂದ ವಿವಾದಕ್ಕೆ ಸಿಲುಕಿಕೊಂಡಿದ್ದು, ಇದೀಗ ಅವರನ್ನ ತಂಡ ಹುದ್ದೆಯಿಂದ ಅಮಾನತು ಮಾಡಿದೆ.

Chennai Super Kings
Chennai Super Kings

By

Published : Jun 17, 2020, 5:41 PM IST

ಚೆನ್ನೈ: ಭಾರತ-ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನ ಅಣುಕಿಸಿ ಟ್ವೀಟ್​ ಮಾಡಿದ್ದಕ್ಕಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವೈದ್ಯರೊಬ್ಬರು ಅಮಾನತುಗೊಂಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವೈದ್ಯರಾಗಿರುವ ಡಾ. ಮಧು ತೊಟ್ಟಪಿಲ್ಲಿಲ್​​​ ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ 'ಶವದ ಪೆಟ್ಟಿಗೆ ಮೇಲೆ ಪಿಎಂ ಕೇರ್ಸ್​​ ಸ್ಟಿಕ್ಕರ್​​ನೊಂದಿಗೆ ಹಿಂದಿರುಗಬಹುದೇ ಎಂಬ ಕುತೂಹಲವಿದೆ' ಎಂದು ಕೇಂದ್ರ ಸರ್ಕಾರವನ್ನ ಅಣುಕಿಸಿ ಟ್ವೀಟ್​ ಮಾಡಿದ್ದರು.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಸ್​ಕೆ ಆಡಳಿತ ಮಂಡಳಿ, ಡಾ. ಮಧು ಮಾಡಿರುವ ವೈಯಕ್ತಿಕ ಟ್ವೀಟ್​ ಮಾಹಿತಿ ನಮಗೆ ಇಲ್ಲ. ತಂಡದ ವೈದ್ಯಕೀಯ ಹುದ್ದೆಯಿಂದ ಅವರನ್ನ ತಕ್ಷಣದಿಂದಲೇ ವಜಾಗೊಳಿಸಲಾಗಿದೆ. ಇದೊಂದು ಕೆಟ್ಟ ಅಭಿರುಚಿ ಹೊಂದಿರುವ ಟ್ವೀಟ್​ ಎಂದು ವಿವರಣೆ ನೀಡಿದೆ.

ABOUT THE AUTHOR

...view details